ದರಿದ್ರ ಕಾಂಗ್ರೆಸ್ ಬಂದ ಮೇಲೆ ರಾಜ್ಯಕ್ಕೆ ಬರ ಬಂದಿದೆ- ಸಂಸದ ಮುನಿಸ್ವಾಮಿ

ಕೋಲಾರ;- ದರಿದ್ರ ಕಾಂಗ್ರೆಸ್ ಸರ್ಕಾರ ಬಂದಿರೋದ್ರಿಂದ ರಾಜ್ಯಕ್ಕೆ ಬರ ಬಂದಿದೆ ಎಂದು ಸಂಸದ ಮುನಿಸ್ವಾಮಿ ಕಿಡಿಕಾರಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಈ ಸರ್ಕಾರದ ಕಾಲ್ಗುಣ ಹೇಗಿದೆ ಅಂದ್ರೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ರಾಜ್ಯಕ್ಕೆ ಬರ ಬಂತು. ಸುಳ್ಳು ಭರವಸೆ ಹೇಳಿ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ, ಅಧಿಕಾರ ಸಿಕ್ಕ ಬಳಿಕ ರೈತರನ್ನು ನಿರ್ಲಕ್ಷ್ಯ ಮಾಡಲಾಯಿತು. ರಾಜ್ಯಾದ್ಯಂತ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಬರಗಾಲ ತೀವ್ರವಾಗಿದೆ ಈವರೆಗೆ ಯಾವ ರೈತರಿಗೂ ಪರಿಹಾರ ಇರಲಿ, ಕನಿಷ್ಟ ರೈತರ ಸಮಸ್ಯೆಗಳಿಗೆ ಸ್ಪಂದಿಸಿಲ್ಲ ಎಂದು ವಾಗ್ದಾಳಿ ನಡೆಸಿದರು.

ಅಧಿಕಾರಕ್ಕೆ ಬರ್ತಿದ್ದಂತೆ ಕಮಿಷನ್, ಲೂಟಿ ಹೊಡೆಯುವ ಕೆಲಸದಲ್ಲಿ ಬ್ಯುಸಿ ಆಗಿದ್ದಾರೆ. ಹೀಗಾಗಿ ನೂರಾರು ಕೋಟಿ ಹಣ ಸರ್ಕಾರಿ ಮನೆಯಲ್ಲಿ ಸಿಕ್ಕಿದೆ. ಇದನ್ನ ನೋಡಿದ್ರೆ ಗೊತ್ತಾಗುತ್ತೆ ಇವರ ಸರ್ಕಾರ ಏನು ಮಾಡುತ್ತಿದೆ. ಹೊಸ ಸರ್ಕಾರ ಬಂದ ಮೇಲೆ ಜಿಲ್ಲೆಗೆ ಏನು ತಂದಿದ್ದಾರೆ ಹೇಳಲಿ? ಕೋಲಾರದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ರೈತರಿಗೂ ಮೋಸ, ಇತ್ತ ದಲಿತರಿಗೂ ಮೊಸ ಮಾಡುತ್ತಿರುವ ಸರ್ಕಾರ ಇದು. ಇಂಥ ಸರ್ಕಾರ ಹೆಚ್ಚು ದಿನ ಉಳಿಯೋದಿಲ್ಲ. ಉಳಿಯಲುಬಾರದು ಎಂದರು

Loading

Leave a Reply

Your email address will not be published. Required fields are marked *