ಸಿನಿಮೀಯ ಶೈಲಿಯಲ್ಲಿ ಆನೆದಂತ ಮಾರಾಟಕ್ಕೆ ಯತ್ನಿಸುತ್ತಿದ್ದವನ್ನು ಬಂಧಿಸಿದ ಪೊಲೀಸರು

ಬೆಂಗಳೂರು;– ಸಿನಿಮೀಯ ಶೈಲಿಯಲ್ಲಿ ಅರಣ್ಯ ಸಂಚಾರಿ ದಳ ಚೇಸ್ ಮಾಡಿ ಆನೆದಂತ ಮಾರಾಟಕ್ಕೆ ಯತ್ನಿಸುತ್ತಿದ್ದ ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ. ತಮಿಳುನಾಡಿನ ಬಾರ್ಡರ್ ವರೆಗೂ ಹೋಗಿ ದಂತಚೋರರನ್ನು ಚೇಸ್ ಮಾಡಿ ಅರೆಸ್ಟ್ ಮಾಡಿದ್ದಾರೆ.
ಎಂಟು ಆರೋಪಿಗಳನ್ನು ಜಾಲಹಳ್ಳಿ ಅರಣ್ಯ ಘಟಕ ಸಂಚಾರಿ ದಳ ಬಂಧಿಸಿದೆ. ರತ್ನ (46) , ಐಯನ್ ಕುಟ್ಟಿ 53, ನಾರಾಯಾಣ ಸ್ವಾಮಿ 50, ದಿನೇಶ್ , ರವಿ 44, ಕೃಷ್ಣ ಮೂರ್ತಿ 35, ಮನೋಹರ್ 61, ವೆಂಕಟೇಶ್ 51 ಬಂಧಿತ ಆರೋಪಿಗಳು..

ಎರಡು ಆನೆ ದಂತವನ್ನು ಕೋಟಿ ಕೋಟಿಗೆ ಮಾರಾಟಕ್ಕೆ ಯತ್ನಿಸುತ್ತಿದ್ದರು. ಕನಕಪುರ ತಮಿಳುನಾಡಿನ ಗಡಿಯಲ್ಲಿ ಸೇಲ್ ಮಾಡುವುದಕ್ಕೆ ಯತ್ನಿಸುವ ಬಗ್ಗೆ ಅರಣ್ಯ ಸಂಚಾರಿ ದಳಕ್ಕೆ ಮಾಹಿತಿ ಲಭಿಸಿದೆ. ಕೂಡಲೇ ಅರಣ್ಯ ಸಂಚಾರಿ ದಳ ಸಿನಿಮೀಯ ಶೈಲಿಯಲ್ಲಿ ಚೇಸ್ ಮಾಡುವಾಗ ಆರೋಪಿಗಳು ಪರಾರಿಗೆ ಯತ್ನಿಸಿದ್ದಾರೆ. ಕೊನೆಗೂ ಆರೋಪಿಗಳನ್ನು ಅರೆಸ್ಟ್ ಮಾಡಲಾಗಿದ್ದು, ಆರೋಪಿಗಳಿಂದ ಝೈಲೋ ಕಾರು , ಎರಡು ಆನೆ ದಂತ , 8 ಮೊಬೈಲ್ ವಶಕ್ಕೆ ಪಡೆಯಲಾಗಿದೆ.

Loading

Leave a Reply

Your email address will not be published. Required fields are marked *