ಧ್ವನಿವರ್ಧಕ ಬಳಕೆ, ಮಾಂಸ ಮಾರಾಟ ನಿಷೇಧಿಸಿದ MP ನೂತನ ಸಿಎಂ ಮೋಹನ್ ಯಾದವ್

ಭೋಪಾಲ್:- ನೂತನ ಸಿಎಂ ಆಗಿ ಬುಧವಾರ ಪ್ರಮಾಣ ವಚನ ಸ್ವೀಕರಿಸಿದ ಮೋಹನ್ ಯಾದವ್ ಅವರು ಎರಡು ಹೊಸ ಘೋಷಣೆ ಮಾಡಿದ್ದಾರೆ. ಬುಧವಾರ ಬೆಳಗ್ಗೆ 11.30ರ ಸುಮಾರಿಗೆ ಪ್ರಮಾಣ ವಚನ ಸ್ವೀಕರಿಸಿದ ಮೋಹನ್ ಯಾದವ್ ಅವರು ಸಾರ್ವಜನಿಕ ಸ್ಥಳಗಳಲ್ಲಿ ಧ್ವನಿವರ್ಧಕ ಬಳಕೆಯನ್ನು ನಿಷೇಧಿಸಿದ್ದಾರೆ.

ಅಲ್ಲದೆ ತೆರೆದ ಜಾಗಗಳಲ್ಲಿ ಮಾಂಸ ಮಾರಾಟವನ್ನು ನಿಷೇಧ ಮಾಡಿ ಆದೇಶ ಹೊರಡಿಸಿದ್ದಾರೆ.

ನಿಗದಿತ ಮಿತಿಯೊಳಗೆ ಧ್ವನಿವರ್ಧಕಗಳ ಬಳಕೆಯನ್ನು ನಿರ್ಬಂಧಿಸಲಾಗುವುದು ಎಂದು ಅವರು ಒತ್ತಿ ಹೇಳಿದರು. ಹೆಚ್ಚಿನ ಧ್ವನಿಯಲ್ಲಿ ಧ್ವನಿವರ್ಧಕಗಳ ಅನಧಿಕೃತ ಬಳಕೆಯನ್ನು ಸಹಿಸಲಾಗುವುದಿಲ್ಲ ಎಂದು ಹೇಳಿದರು. ಮೋಹನ್ ಯಾದವ್ ಅವರು ಮಧ್ಯಪ್ರದೇಶದಲ್ಲಿ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಆದೇಶ ನೀಡಿದ್ದಾರೆ.

ಪ್ರತಿ ಜಿಲ್ಲೆಯಲ್ಲೂ ಯುವ ಜನರಿಗಾಗಿ ಶ್ರೇಷ್ಠತೆಯ ಕಾಲೇಜುಗಳನ್ನು ಸ್ಥಾಪಿಸಲಾಗುವುದು ಎಂದು ಸಿಎಂ ಯಾದವ್ ಹೇಳಿದರು. 52 ಕಾಲೇಜುಗಳನ್ನು ಆಯ್ಕೆ ಮಾಡಲಾಗಿದ್ದು, ಇವುಗಳನ್ನು ಪ್ರಧಾನ ಮಂತ್ರಿಗಳ ಶ್ರೇಷ್ಠ ಕಾಲೇಜುಗಳು ಎಂದು ಕರೆಯಲಾಗುವುದು ಎಂದರು.

Loading

Leave a Reply

Your email address will not be published. Required fields are marked *