ಜಮ್ಮು ಮತ್ತು ಕಾಶ್ಮೀರದ ಮುಸ್ಲಿಂ ಹುಡುಗಿಯ ಭಜನೆಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಉರಿ ತಹಸಿಲ್‌ನ ಮುಸ್ಲಿಂ ಸೈಯದ್ ಸಮುದಾಯಕ್ಕೆ ಸೇರಿದ ಕಾಲೇಜು ವಿದ್ಯಾರ್ಥಿನಿ ಸೈಯದಾ ಬಟೂಲ್ ಝೆಹ್ರಾ (19)ಗಾಯಕ ಜುಬಿನ್ ನೌಟಿಯಾಲ್ ಹಾಡಿದ ಭಜನೆಯಿಂದ ಸ್ಫೂರ್ತಿ ಪಡೆದು ಪಹಾರಿ ಭಾಷೆಯಲ್ಲಿ ಹಾಡಿದ ಸುಮಧುರ ರಾಮ ಭಜನೆ ಆನ್‌ಲೈನ್‌ನಲ್ಲಿ ವೈರಲ್ ಆಗಿದ್ದು ಚರ್ಚೆಯ ವಿಷವಾಗಿದೆ.
ಅಯೋಧ್ಯೆಯಲ್ಲಿ ರಾಮ ಮಂದಿರದಲ್ಲಿ ದೇಶದೆಲ್ಲೆಡೆ ರಾಮ ನಾಮ ಜಪ ತೀವ್ರವಾಗಿರುವ ವೇಳೆ ಜಮ್ಮು ಮತ್ತು ಕಾಶ್ಮೀರದ ಮುಸ್ಲಿ ಹುಡುಗಿಯೊಬ್ಬಳು ಹಾಡಿರುವ ರಾಮ ಭಜನೆಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.