ಕೋಲಾರ: ಒಂಟಿ ಮನೆಯಲ್ಲಿದ್ದ ಅರ್ಚಕರ ಕುಟುಂಬದ ಮೇಲೆ ಹಲ್ಲೆ ಮಾಡಿ ದರೋಡೆ ಮಾಡಿದ ಘಟನೆ ಜಿಲ್ಲೆಯ ಮಾಲೂರು ತಾಲೂಕಿನ ತೊಳಕನಹಳ್ಳಿ ಗ್ರಾಮದ ತೋಟದಲ್ಲಿ ನಡೆದಿದೆ. ಅಷ್ಟೇ ಅಲ್ಲ, ಒಂಟಿ ಮನೆಯಲ್ಲಿದ್ದ ಅರ್ಚಕ ದೊಡ್ಡನರಸಯ್ಯ ಶಾಸ್ತ್ರಿ ಹಾಗೂ ಪತ್ನಿ ಇಬ್ಬರನ್ನು ಮಾರಾಕಾಸ್ತ್ರಗಳಿಂದ ಥಳಿಸಿ, ಮನೆಯಲ್ಲಿದ್ದ ಸಾವಿರಾರು ರೂಪಾಯಿ ನಗ-ನಾಣ್ಯ ದರೋಡೆ ಮಾಡಿದ್ದಾರೆ.
ಇನ್ನು 6 ಜನ ದುಷ್ಕರ್ಮಿಗಳಿಂದ ಲಾಂಗು ಮಚ್ಚು ತೋರಿಸಿ ಈ ಕೃತ್ಯ ಎಸಗಲಾಗಿದ್ದು, ಮಾಲೂರು ಆಸ್ಪತ್ರೆಯಲ್ಲಿ ಅರ್ಚಕ ಕುಟುಂಬ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು ಮಾರ್ಗಮದ್ಯೆ ಯಟ್ಟಕೋಡಿ ಗ್ರಾಮದ ಮೂರು ಅಂಗಡಿಗಳನ್ನು ದೋಚಿ ಪರಾರಿಯಾಗಿರುವ ದರೋಡೆಕೋರರು,
ಸುಮಾರು 15 ಲಕ್ಷ ಮೌಲ್ಯದಷ್ಟು ಗುಟ್ಕಾ ಹೊತ್ತೊಯ್ದಿದ್ದಾರೆ. ಸ್ಥಳಕ್ಕೆ ಹೆಚ್ವುವರಿ ಪೊಲೀಸ್ ವರಿಷ್ಠಾಧಿಕಾರಿ ಬಾಸ್ಕರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮಾಸ್ತಿ ಪೊಲೀಸ್ ಠಾಣೆಯಲ್ಲಿ ರಾಬರಿ ಪ್ರಕರಣ ಹಾಗೂ ಮಾಲೂರು ಪೊಲೀಸ್ ಠಾಣೆಯಲ್ಲಿ ಸರಣಿ ಕಳ್ಳತನ ಪ್ರಕರಣ ದಾಖಲಾಗಿದೆ.