ಬೆಂಗಳೂರು:- ಕಳೆದ ಕೆಲ ದಿನಗಳಿಂದ ಜಯನಗರ ಠಾಣಾ ವ್ಯಾಪ್ತಿಯಲ್ಲಿ ಬೈಕ್ ಕಳ್ಳರು ಆ್ಯಕ್ಟೀವ್ ಆಗಿದ್ದಾರೆ. ಕಳ್ಳರಿಂದ ಜಯನಗರ ಜನ ಬೇಸತ್ತು ಹೋಗಿದ್ದಾರೆ. ಪೊಲೀಸರಿಗೆ ದೂರು ನೀಡಿದ್ರೂ ಪ್ರಯೋಜನೆ ಇಲ್ಲ ಅಂತಾ ಸ್ಥಳೀಯರು ಆಕ್ರೋಶ ಹೊರ ಹಾಕಿದ್ದಾರೆ. ಕಳ್ಳರ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಜಯನಗರ 5ನೇ ಹಂತದಲ್ಲಿ ಕಳ್ಳರ ಕಾಟ ಹೆಚ್ಚಾಗಿದೆ. ಕಳೆದ ಎರಡು ಮೂರು ವಾರಗಳಿಂದಲೂ ಜಯನಗರದಲ್ಲಿ ಕಳ್ಳರು ಆ್ಯಕ್ಟೀವ್ ಆಗಿದ್ದಾರೆ.