ರಾಜಧಾನಿ ಬೆಂಗಳೂರಿನ ಅಂಡರ್ ಪಾಸ್ ನಲ್ಲಿ ಲಾರಿ ಸಿಲುಕಿರುವ ಘಟನೆ ಜರುಗಿದೆ. ಮೈಸೂರು ಬ್ಯಾಂಕ್ ಕಡೆಯಿಂದ ಬಂದ ಲಾರಿಯೊಂದು ಮಹಾರಾಣಿ ಕಾಲೇಜ್ ಬಳಿ ಇರುವ ಅಂಡರ್ ಪಾಸ್ನಲ್ಲಿ ಸಿಲುಕಿಕೊಂಡಿದೆ. ಈ ಹಿನ್ನೆಲೆ ಉಪ್ಪಾರಪೇಟೆ ಸಂಚಾರಿ ಪೊಲೀಸರು ಲಾರಿ ಹೊರ ತೆಗೆಯಲು ಜೆಸಿಬಿ ತರಿಸಿ ಹರಸಾಹಸ ಪಡುತ್ತಿದ್ದಾರೆ. ಸದ್ಯ ಸಂಚಾರಿ ಪೊಲೀಸರು ಅಂಡರ್ ಪಾಸ್ ಬಂದ್ ಮಾಡಿ ಟ್ರಾಫಿಕ್ ಡೈವರ್ಶನ್ ನೀಡಿದ್ದಾರೆ. ಚಾಲುಕ್ಯ ಸರ್ಕಲ್ಗೆ ಬರಲು ಫ್ರೀಡಂ ಪಾರ್ಕ್ ಕಡೆಯಿಂದ ಬರಲು ಸಂಚಾರಿ ಪೊಲೀಸರ ಸೂಚನೆ ನೀಡಿದ್ದಾರೆ. ಅಂಡರ್ ಪಾಸ್ನಲ್ಲಿ ಲಾರಿ ತೆರಳಲು ಸಾಧ್ಯವಿಲ್ಲ. ಆದರೂ ಲಾರಿ ಬಂದಿರುವುದು ವಿಪರ್ಯಾಸ ಎಂದು ಹೇಳಲಾಗಿದೆ.