ರೈತರ ಬದುಕು ಆತಂಕದ ಸ್ಥಿತಿಗೆ ತಲುಪಿದೆ -ಯಡಿಯೂರಪ್ಪ

ಕೊರಟಗೆರೆ;- ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಅವರು, ರೈತರ ಬದುಕು ಆತಂಕದ ಸ್ಥಿತಿಗೆ ತಲುಪಿದೆ ಎಂದು ಸರಕಾರದ ವಿರುದ್ಧ ಯಡಿಯೂರಪ್ಪ ಕಿಡಿಕಾರಿದ್ದಾರೆ. ತಾಲ್ಲೂಕಿನ ಬೋಡಬಂಡೇನಹಳ್ಳಿ ಗ್ರಾಮದ ಹತ್ತಿರದ ರೈತರ ಜಮೀನುಗಳಲ್ಲಿ ಬರ ವಿಕ್ಷಣೆ ಮಾಡಿ ಮಾತನಾಡಿ, ರಾಜ್ಯದಲ್ಲಿ ಬರ ನಿರ್ವಹಣೆ ಮಾಡುವಲ್ಲಿ ಮತ್ತು ರೈತರ ಕಷ್ಟಗಳಿಗೆ ಸ್ಪಂದಿಸುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ. ರಾಜ್ಯದಲ್ಲಿ ಮಳೆ ಸಂಪೂರ್ಣ ಕೈಕೊಟ್ಟಿದೆ ರೈತರ ಬದುಕು ಆತಂಕ ಸ್ಥಿತಿ ತಲುಪಿದೆ, ಈ ಭಾಗದಲ್ಲಿ ಮುಸುಕಿನ ಜೋಳ, ಮೆಕ್ಕೆ ಜೋಳ, ರಾಗಿ, ನೆಲಕಡಲೇ, ತೊಗರಿ ಸೇರಿದಂತೆ ಎಲ್ಲಾ ಬೆಳೆಗಳು ಸಂಪೂರ್ಣ ಹಾಳಾಗಿದ್ದು ರೈತರು ಬೆಳೆ ಕಳೆದುಕೊಂಡು ಮೇವು ದೊರೆಯದೆ ಸಂಕಷ್ಟ ಸ್ಥಿತಿಯಲ್ಲಿ ಇದ್ದಾರೆ,

ಅದರೆ ಇಲ್ಲಿಯವರೆಗೆ ರಾಜ್ಯ ಸರ್ಕಾರದ ಯಾವುದೇ ಮಂತ್ರಿಗಳು ರೈತರ ಜಮೀನಿಗೆ ಬಂದು ಸ್ಥಳ ಪರಿಶೀಲನೆ ಮಾಡಿಲ್ಲ, ಬರ ಪರಿಹಾರ ನೀಡುವಲ್ಲಿ ವಿಫಲರಾಗಿದ್ದಾರೆ, ಮಂತ್ರಿಗಳು ಜನರು ಕೊಟ್ಟ ಅರ್ಜಿಯನ್ನು ತೆಗೆದುಕೊಂಡು ಹೋಗಿ ಅದಕ್ಕೆ ಯಾವುದೇ ಉತ್ತರವಾಗಲಿ ನೀಡುತ್ತಿಲ್ಲ ಪರಿಹಾರ ಒದಗುಸುತ್ತಿಲ್ಲ, ಇದರೊಂದಿಗೆ ರೈತರನ್ನು ಸಂಪೂರ್ಣವಾಗಿ ನಿರ್ಲಕ್ಷಿಸುತ್ತಿರುವ ರಾಜ್ಯ ಸರ್ಕಾರವು ಕೂಡಲೇ ರೈತರ ನೆರವಿಗೆ ಧಾವಿಸಿ ಬರ ಪರಿಹಾರ ನೀಡಬೇಕು ಇಲ್ಲದ್ದಿದಲ್ಲಿ ರಾಜ್ಯಾದ್ಯಂತ ರೈತರ ಪರ ಹೋರಾಟ ಮಾಡಲಾಗುವುದು ಎಂದರು.

Loading

Leave a Reply

Your email address will not be published. Required fields are marked *