ಹುಬ್ಬಳ್ಳಿ: ಪ್ರೀತಿಸಿ ಮದುವೆಯಾದ ಹೆಂಡತಿಯನ್ನ ಗಂಡ ಕೊಲೆಗೈದು ಪರಾರಿಯಾದ ಘಟನೆ ಹುಬ್ಬಳ್ಳಿಯ ನೇಕಾರ ನಗರದಲ್ಲಿ ನಡೆದಿದೆ. ಮೃತಳನ್ನು ಸುಧಾ (20) ಎಂದು ಗುರುತಿಸಲಾಗಿದೆ. ಆರೋಪಿ ಪತಿ ಶಿವಯ್ಯ ನಾಪತ್ತೆಯಾಗಿದ್ದಾನೆ.
ಬೆಳಗಿನ ಜಾವ ನೀರು ಬಂದಾಗ ಸುಧಾ ಬಾಗಿಲು ತೆಗಿದಿರಲಿಲ್ಲ. ಅಲ್ಲದೆ ಮಗು ಕೂಡಾ ಒಳಗೆ ಅಳುತ್ತಿರುವುದನ್ನು ಗಮನಿಸಿದ ಅಕ್ಕ ಪಕ್ಕದ ನಿವಾಸಿಗಳು ಬಾಗಿಲು ಒಡೆದಿದ್ದಾರೆ. ಈ ವೇಳೆ ಸುಧಾ ಸಾವಿಗೀಡಾಗಿರುವುದು ಬೆಳಕಿಗೆ ಬಂದಿದೆ.
ಶಿವಯ್ಯ ಲಿಂಗಾಯತ ಸಮುದಾಯಕ್ಕೆ ಸೇರಿದ್ದರೆ, ಸುಧಾ ಲಮಾಣಿ ಸಮುದಾಯಕ್ಕೆ ಸೇರಿದ್ದರು. ಈ ಇಬ್ಬರೂ ಪ್ರೀತಿಸಿ ಮದುವೆಯಾಗಿದ್ದರು. ಸುಧಾ, ಶಿವಯ್ಯ ದಂಪತಿಗೆ ಇತ್ತೀಚೆಗೆ ಮಗು ಕೂಡಾ ಜನಸಿತ್ತು. ಆದರೆ ಏನಾಯ್ತೋ ಗೊತ್ತಿಲ್ಲ ಆಕೆಯ ದುರಂತ ಅಂತ್ಯವಾಗಿದೆ.
ಶಿವಯ್ಯ ಕ್ಯಾಟರಿಂಗ್ ಕೆಲಸ ಮಾಡುತ್ತಿದ್ದ. ಬೆಳಗ್ಗೆ ಮನೆಯಿಂದ ಹೋದರೆ ರಾತ್ರಿಯೇ ವಾಪಾಸ್ ಆಗುತ್ತಿದ್ದ. ಇದೆಲ್ಲ ಗೊತ್ತಿದ್ದೂ ಯುವತಿ ಆತನನ್ನು ಮದುವೆಯಾಗಿದ್ದಳು. ಅಲ್ಲದೇ ಇತ್ತೀಚೆಗೆ ವಿಪರೀತ ಸಾಲ ಮಾಡಿಕೊಂಡಿದ್ದ, ಇದೇ ವಿಚಾರವಾಗಿ ಇಬ್ಬರ ನಡುವೆ ಹೆಂಡತಿಯೊಂದಿಗೆ ಗಲಾಟೆ ನಡೆಯುತ್ತಿತ್ತು ಎಂಬ ಮಾಹಿತಿ ತಿಳಿದು ಬಂದಿದೆ. ಸ್ಥಳಕ್ಕೆ ಪೊಲಿಸರು (Police) ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.