ಬೆಂಗಳೂರು : ಎರಡೂವರೆ ವರ್ಷದ ಬಳಿಕ ಮುಖ್ಯಮಂತ್ರಿ ಹಾಗು ಸಚಿವರು ಬದಲಾವಣೆ ಯಾಗಲಿದ್ದಾರೆ ನಾನು ನನ್ನ ಸಚಿವ ಸ್ಥಾನವನ್ನು ಬಿಟ್ಟುಕೊಡಲು ಸಿದ್ದನಿದ್ಧೇನೆ ಎಂದು ಆಹಾರ ಸಚಿವ ಕೆ.ಹೆಚ್ ಮುನಿಯಪ್ಪ ಹೇಳಿದರು. ನಗರದಲ್ಲಿ ಮಾತನಾಡಿದ ಅವರು, ಎರಡೂವರೆ ವರ್ಷ ಆದಮೇಲೆ ಸಚಿವರ ಬದಲಾವಣೆ ಆಗಬೇಕು ಜಿಲ್ಲಾಧ್ಯಕ್ಷರಿಗೆ ಎರಡೂವರೆ ವರ್ಷದಂತೆ ಭಾಗ ಮಾಡಿರುತ್ತೇವೆ ಅದೇ ರೀತಿ ಮೊದಲಾರ್ಧದಲ್ಲಿ ಸಚಿವರಾಗಿದ್ದವರನ್ನು ಬಿಟ್ಟು ಉಳಿದವರನ್ನ ಮಂತ್ರಿ ಮಾಡಬೇಕು.
ಸಚಿವರು ಲೋಕಸಭೆಗೆ ನಿಲ್ಲೋದು ಹೈಕಮಾಂಡ್ ತೀರ್ಮಾನ ಮಾಡಲಿದೆ, ಈ ಸ್ಥಾನಗಳಿಗೆ ಸಚಿವರೇ ಬೇಕಾಗಿಲ್ಲ, ಪಕ್ಷದಲ್ಲಿ ಹಿರಿಯರೂ ಇದ್ದಾರೆ ಅವರಿಗೂ ಅವಕಾಶ ಕೊಡಲಿ, ಇನ್ನೂ ಮುಖ್ಯಮಂತ್ರಿಗಳ ಬದಲಾವಣೆ ವಿಚಾರ ಹೈಕಮಾಂಡ್ ಗೆ ಬಿಟ್ಟದ್ದು ಸಿಎಂ, ಡಿಸಿಎಂ ಯಾರೆಂದು ಹೈಕಮಾಂಡ್ ನಿರ್ಧಾರ ಮಾಡುತ್ತದೆ. ಸದ್ಯದ ಮಟ್ಟಿಗಂತು ಸಿಎಂ ಬದಲಾವಣೆ ಇಲ್ಲ ಯಾವ ಕುರ್ಚಿ ಖಾಲಿ ಇಲ್ಲ ಎಂದು ಅವರು ಹೇಳಿದರು.