ಸರಕಾರ ಆರ್ಥಿಕವಾಗಿ ದಿವಾಳಿಯಾಗಿದೆ; ಈಶ್ವರಪ್ಪ

ಶಿವಮೊಗ್ಗ: ಕ್ಯಾಬಿನೆಟ್ ಬಗ್ಗೆ ಒಬ್ಬೊಬ್ಬರು ಒಂದೊಂದು ಹೇಳಿಕೆ ನೀಡುತ್ತಿದ್ದಾರೆ. ಎರಡೂವರೆ ವರ್ಷದ ನಂತರ ಹಳಬರು ತೆಗೆದು ಹೊಸಬರು ಹಾಕುತ್ತೇವೆ ಅಂತಾರೆ. ಅಶೋಕ್ ಪಟ್ಟಣ್ ಕ್ಯಾಬಿನೆಟ್ ಬಗ್ಗೆ ಮಾತನಾಡುತ್ತಾರೆ. ಈ ಬಗ್ಗೆ ಎಂ.ಬಿ.ಪಾಟೀಲ್, ಅಶೋಕ್ ಪಟ್ಟಣ್ ಹೇಳಲು ಯಾರು? ಒಬ್ಬೊಬ್ಬ ಮಂತ್ರಿ ಒಂದೊಂದು ಹೇಳಿಕೆ ಕೊಡೋದು ಒಳ್ಳೆಯದಲ್ಲ.

ಮುಖ್ಯಮಂತ್ರಿಗಳು ಗಮನ ಹರಿಸಲಿ ಈ ರೀತಿ ಸಚಿವರು ಹೇಳಿಕೆ ಕೊಡುವುದು ನಿಲ್ಲಿಸಲಿ. ಮೈಸೂರು ಬಿಟ್ಟರೆ ಶಿವಮೊಗ್ಗ ದಸರಾ ವೈಭವವಾಗಿ ನಡೆಯುತ್ತದೆ. ಆದರೆ ದಸರಾ ಆಚರಣೆಗೆ ಸರ್ಕಾರ ಕೇವಲ 20 ಲಕ್ಷ ರೂ. ಅಷ್ಟೇ ಕೊಟ್ಟಿದೆ. ಏಕೆ ಸರಕಾರಕ್ಕೆ ಬಡತನ ಇದೆಯಾ? ಸರಕಾರ ಆರ್ಥಿಕವಾಗಿ ದಿವಾಳಿಯಾಗಿದೆ. ನೀವು ಹಣ ಕೊಡದಿದ್ದರೆ ಹೇಳಿ ನಾವು ಸಾರ್ವಜನಿಕರ ಬಳಿ ಚಂದಾ ಎತ್ತಿ ದಸರಾ ಆಚರಣೆ ಮಾಡುತ್ತೇವೆ ಎಂದು ಮಾಜಿ ಸಚಿವ ಕೆಎಸ್​ ಈಶ್ವರಪ್ಪ ಹೇಳಿದರು.

Loading

Leave a Reply

Your email address will not be published. Required fields are marked *