ಲಕ್ನೋ: ಶಾಲೆಗೆ ಹೋಗಲು ನಿರಾಕರಿಸಿದ್ದಕ್ಕೆ ತಾಯಿ ಹೊಡೆದಳೆಂದು ನೊಂದ ಅಪ್ರಾಪ್ತೆಯೊಬ್ಬಳು ರೈಲಿನಡಿ ಹಾರಿ ಆತ್ಮಹತ್ಯೆಗೆ ಶರಣಾದ ಘಟನೆ ಉತ್ತರಪ್ರದೇಶದ (Uttarpradesh) ಮಥುರಾದಲ್ಲಿ ನಡೆದಿದೆ. 13 ವರ್ಷದ ಬಾಲಕಿಗೆ ಶಾಲೆಗೆ ಹೋಗಲು ಇಷ್ಟವಿರಲಿಲ್ಲ. ಹೀಗಾಗಿ ಆಕೆ ಅಂದು ಶಾಲೆಗೆ ಹೋಗಿರಲಿಲ್ಲ ಎಂದು ಪೊಲೀಸರು ಹೇಳಿದ್ದಾರೆ.
ಇತ್ತ ಶಾಲೆಗೆ ಹೋಗುವಂತೆ ಹೇಳಿ ತಾಯಿ ಮಗಳಿಗೆ ಬೈದು, ಹೊಡೆದಿದ್ದಾರೆ. ಅಂತೆಯೇ ಬಾಲಕಿ ಶಾಲೆಗೆ ತೆರಳಿ ಅಲ್ಲಿಂದ ನೇರವಾಗಿ ರೈಲ್ವೆ ಹಳಿಯತ್ತ ಹೋಗಿದ್ದಾಳೆ. ಬಳಿಕ ರೈಲು ಬರುತ್ತಿದ್ದಂತೆಯೇ ಹಳಿಗೆ ಹಾರಿ ಪ್ರಾಣ ಕಳೆದುಕೊಂಡಿದ್ದಾಳೆ. ಈ ಸಂಬಂಧ ಅಲ್ಲಿಯ ಎಸ್‍ಪಿ ಪ್ರಕಾಶ್ ಸಿಂಗ್ ಪ್ರತಿಕ್ರಿಯಿಸಿ, ಶಾಲೆಗೆ ಹೋಗಲು ನಿರಾಕರಿಸಿದ್ದಕ್ಕೆ ಬಾಲಕಿಗೆ ಆಕೆಯ ತಾಯಿ ಹೊಡೆದಿದ್ದಾರೆ. ಇದೇ ಕೋಪದಿಂದ ಶಾಲೆಗೆ ಹೋಗಿರುವ ಆಕೆ ರೈಲಿನಡಿ ಹಾರಿ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.