ಮೈಸೂರು: ವಿವಾಹಿತ ಮಹಿಳೆಗೆ ಮೆಸೇಜ್ ಮಾಡಿದ್ದಕ್ಕೆ ಮಹಿಳೆಯ ಮನೆಯವರು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಎಚ್.ಡಿ.ಕೋಟೆಯ ನೇರಳೆ ಹುಂಡಿ ಗ್ರಾಮದಲ್ಲಿ ನಡೆದಿದೆ. ಭಾನುಪ್ರಕಾಶ್ ಅಲಿಯಾಸ್ ಸಿದ್ದು ಕೊಲೆಯಾದ ಯುವಕನಾಗಿದ್ದು, ಅದೇ ಗ್ರಾಮದ ವಿವಾಹಿತ ಮಹಿಳೆಗೆ ಫೋನ್, ಮೆಸೇಜ್ ಮಾಡುತ್ತಿದ್ದ ಆರೋಪ ಕೇಳಿಬಂದಿತ್ತು. ಇದೇ ವಿಚಾರಕ್ಕೆ ಮಹಿಳೆಯ ಮನೆಯವರು, ಯುವಕನ ನಡುವೆ ಜಗಳ ಕೂಡ ಆಗಿ ನ್ಯಾಯ ಪಂಚಾಯ್ತಿ ಮಾಡಿ ಗ್ರಾಮಸ್ಥರು ಸುಮ್ಮನಾಗಿಸಿದ್ದರು. ಆದ್ರೆ ಅದೇ ದಿನದ ಮರು ದಿನವೇ ಕಬಿನಿ ಎಡದಂಡೆ ನಾಲೆ ದಡದಲ್ಲಿ ಭಾನುಪ್ರಕಾಶ್ ಅಲಿಯಾಸ್ ಸಿದ್ದು ಶವ ಪತ್ತೆಯಾಗಿದೆ. ಈ ಸಂಬಂಧ 6 ಆರೋಪಿಗಳನ್ನು ವಶಕ್ಕೆ ಪಡೆದ ಪೊಲೀಸರು ಬೀಚನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.