ನಿಗಮ ಮಂಡಳಿ ಪಟ್ಟಿ ಹೈಕಮಾಂಡ್ ಗೆ ಕಳಿಸಲಾಗಿದೆ -ಸಿಎಂ ಸಿದ್ದರಾಮಯ್ಯ

ಬೆಂಗಳೂರು:- ಹೈಕಮಾಂಡ್ ಗೆ ನಿಗಮ ಮಂಡಳಿ ಪಟ್ಟಿ​ಗೆ ಕಳುಹಿಸಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಮೊದಲು ಶಾಸಕರಿಗೆ ನಿಗಮ ಮಂಡಳಿ ಅಧ್ಯಕ್ಷಗಿರಿ ನೀಡುತ್ತೇವೆ. ನಂತರದ ಪಟ್ಟಿಯಲ್ಲಿ ಕಾರ್ಯಕರ್ತರಿಗೆ ಅವಕಾಶ ನೀಡಲಾಗುವುದು. ನಿಗಮ ಮಂಡಳಿ ನೇಮಕದ ಪಟ್ಟಿಯನ್ನು ಹೈಕಮಾಂಡ್​ಗೆ ಕಳುಹಿಸಿದ್ದೇವೆ.‌ ಹೈಕಮಾಂಡ್ ಒಪ್ಪಿಗೆ ಕೊಡಬೇಕು ಎಂದರು.

ಮೊದಲು ಶಾಸಕರಿಗೆ ನಿಗಮ ಮಂಡಳಿ‌ ನೇಮಕಾತಿಯಲ್ಲಿ ಅವಕಾಶ ನೀಡುತ್ತೇವೆ. ಎರಡು, ಮೂರನೇ ಹಂತದಲ್ಲಿ ಕಾರ್ಯಕರ್ತರಿಗೆ ನೀಡುತ್ತೇವೆ ಎಂದು ಇದೇ ವೇಳೆ ಸಿಎಂ ಸ್ಪಷ್ಟಪಡಿಸಿದರು. ಬಿ. ಆರ್ ಪಾಟೀಲ್ ಪತ್ರ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ನಾನು ಇನ್ನೂ ಪತ್ರ ನೋಡಿಲ್ಲ. ನನಗೆ ಪತ್ರ ಇನ್ನೂ ತಲುಪಿಲ್ಲ. ಅವರು ಏನು ಬರೆದಿದ್ದಾರೆ ಅಂತ ನೋಡ್ತೇನೆ ಎಂದು ತಿಳಿಸಿದರು.

ನಿಗಮ ಮಂಡಳಿಗಳ ನೇಮಕಾತಿಯನ್ನು ಮೂರು ನಾಲ್ಕು ಹಂತಗಳಲ್ಲಿ ಮಾಡಲಾಗುವುದು ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಸ್ಪಷ್ಟಪಡಿಸಿದರು. ನಿಗಮ‌ ಮಂಡಳಿ ನೇಮಕಾತಿ, ಸಮಿತಿಗಳ ರಚನೆ, ಗ್ಯಾರಂಟಿಗಳ ಅನುಷ್ಠಾನದ ವಿಚಾರವನ್ನು ಒಂದೊಂದಾಗಿ ಬಗೆಹರಿಸಲಿದ್ದೇವೆ ಎಂದು ತಿಳಿಸಿದರು.

ತೆಲಂಗಾಣದಲ್ಲಿ ನಾವು ಗೆಲ್ಲುತ್ತೇವೆ. ಡಿಸೆಂಬರ್ 3 ರಂದು ತೆಲಂಗಾಣದಲ್ಲಿ ನಾವು ಅಧಿಕಾರಕ್ಕೆ ಬರ್ತೇವೆ. ಕೆಸಿಆರ್ ಲೂಟಿ ಮಾಡಿದ್ದೇ ಆಗಿದೆ. ಭ್ರಷ್ಟಾಚಾರದ ಸರ್ಕಾರವನ್ನು ಜನ ಕಿತ್ತು ಹಾಕಲಿದ್ದಾರೆ. ಡಿಸೆಂಬರ್ 3 ರಂದು ಜ‌ನ ಕಿತ್ತು ಹಾಕ್ತಾರೆ. ಕಾಂಗ್ರೆಸ್ ಸರ್ಕಾರ ಅಲ್ಲಿ ಅಧಿಕಾರಕ್ಕೆ ಬರಲಿದೆ. ಮಧ್ಯಪ್ರದೇಶ, ರಾಜಸ್ತಾನ, ಛತ್ತೀಸ್​ಗಢದಲ್ಲೂ ಬರ್ತೇವೆ. ನಾವೇ ಅಲ್ಲಿಯೂ ಅಧಿಕಾರಕ್ಕೆ ಬರುತ್ತೇವೆ ಎಂದು ಹೇಳಿದರು.

Loading

Leave a Reply

Your email address will not be published. Required fields are marked *