ಚುನಾವಣೆ ವೇಳೆ ಹಂಚಿದ್ದ ಕುಕ್ಕರ್ ಸ್ಫೋಟ; ಬಾಲಕಿಗೆ ಗಂಭೀರ ಗಾಯ

ರಾಮನಗರ: ಚುನಾವಣೆ ವೇಳೆ ಹಂಚಲಾಗಿದ್ದ ಕುಕ್ಕರ್ ಸ್ಫೋಟಗೊಂಡು ಬಾಲಕಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ರಾಮನಗರದಲ್ಲಿ ನಡೆದಿದೆ.

ರಾಮನಗರದಲ್ಲಿ ಈ ಘಟನೆ ನಡೆದಿದ್ದು, ಬಾಲಕಿ ಮಹಾಲಕ್ಷ್ಮಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಚುನಾವಣೆಯಲ್ಲಿ ಹಂಚಲಾಗಿದ್ದ ಕುಕ್ಕರ್ ನಿಂದ ಅಡುಗೆ ಮಾಡುತ್ತಿದ್ದಾಗ ಕುಕ್ಕರ್ ಏಕಾಏಕಿ ಸ್ಫೋಟಗೊಂಡಿದೆ.

ಬಾಲಕಿ ಗಾಯಗೊಂಡಿದ್ದಾಳೆ.

ಗಾಯಾಳು ಬಾಲಕಿಗೆ ರಾಮನಗರ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಚುನಾವಣೆ ವೇಳೆ ಕಾಂಗ್ರೆಸ್ ಮುಖಂಡ ವೇದ ಎಂಬುವವರು ಈ ಕುಕ್ಕರ್ ಹಂಚಿದ್ದರು ಎಂಬ ಆರೋಪ ಕೇಳಿಬಂದಿದೆ.

Loading

Leave a Reply

Your email address will not be published. Required fields are marked *