ತುಮಕೂರು:- ಭಾರತ ಮತ್ತು ನ್ಯೂಜಿಲೆಂಡ್ ತಂಡದ ಸೆಮಿ ಫೈನಲ್ ಪಂದ್ಯವನ್ನು ಮದುವೆ ಮಂಟಪದಲ್ಲಿ ವಧು ವರರು ವೀಕ್ಷಿಸಿರುವ ಘಟನೆ ತುಮಕೂರಿನಲ್ಲಿ ನಡೆದಿದೆ.
ವಧು ವರರಿಂದ ಮದುವೆ ಮಂಟಪದಲ್ಲಿ ಇಂಡೋ – ಕಿವೀಸ್ ಸೆಮಿ ಫೈನಲ್ ವೀಕ್ಷಣೆ ಮಾಡಲಾಗಿದೆ. ಆರತಕ್ಷತೆಗೆ ಬರುವ ಸಂಬಂದಿಕರು, ಸ್ನೇಹಿತರಿಗಾಗಿ ಎಲ್‌ಈಡಿ ಮೂಲಕ ಪಂದ್ಯವೀಕ್ಷಣೆಗೆ ಅವಕಾಶ ಮಾಡಲಾಗಿತ್ತು.
ಪಾವಗಡದ ಎಸ್ ಎಸ್ ಕೆ ಕಲ್ಯಾಣ ಮಂಟಪದಲ್ಲಿ ಕ್ರಿಕೇಟ್ ಪ್ರೇಮಿಗಳ ಮದುವೆ ನಡೆದಿದೆ.
ತೀವ್ರ ಕುತೂಹಲ ಮೂಡಿಸಿದ್ದ ಪಂದ್ಯಕ್ಕಾಗಿ ಎಲ್‌ಈಡಿಗಳ ಅಳವಡಿಸಿ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗಿತ್ತು. ಸೌಂದರ್ಯ, ಕಾರ್ತಿಕ್ ಮದುವೆಯಲ್ಲಿ ಸೆಮಿ ಫೈನಲ್ ಪಂದ್ಯ ವಿಕ್ಷಣೆ ಮಾಡಲಾಗಿದೆ.
ಆರ್ಕೇಸ್ಟ್ರಾ ಜೊತೆ ಮ್ಯಾಚ್ ನೋಡಲು ಎಲ್‌ಈಡಿ ವ್ಯವಸ್ಥೆ ಮಾಡಲಾಗಿತ್ತು. ಮದುವೆ ಆರತಕ್ಷತೆಯಲ್ಲಿ ಭರ್ಜರಿ ಊಟದ ಜೊತೆ ಪಂದ್ಯ ವೀಕ್ಷಣೆಯ ಭಾಗ್ಯ ದೊರೆತಿದೆ. ಟೀಂ ಇಂಡಿಯಾ ಗೆಲ್ಲುತ್ತಿದ್ದಂತೆ ಮದುವೆ ಮಂಟಪದಲ್ಲಿ ಸಂಭ್ರಮಾಚರಣೆ ನಡೆದಿದೆ.