ಬ್ರ್ಯಾಂಡ್ ಬೆಂಗಳೂರಲ್ಲಿ ತಲೆ ಎತ್ತಲಿದೆ ಮತ್ತೊಂದು ಸಸ್ಯಕಾಶಿ

ಬೆಂಗಳೂರು: ಬ್ರ್ಯಾಂಡ್ ಬೆಂಗಳೂರು‌ ಹೆಸರಲ್ಲಿ ಬಿಬಿಎಂಪಿ ಪಾಲಿಕೆ ಹೊಸ ಯೋಜನೆಯೊಂದನ್ನು ರೂಪಿಸಿದ್ದು, ನಗರದಲ್ಲಿ ಲಾಲ್‌ಬಾಗ್, ಕಬ್ಬನ್ ಪಾರ್ಕ್ ಮಾದರಿಯಲ್ಲಿ ಮತ್ತೊಂದು ಸಸ್ಯಕಾಶಿ ತಲೆ ಎತ್ತಲಿದೆ.

ಗಾರ್ಡನ್ ಸಿಟಿಯಲ್ಲಿ ಸುಮಾರು 150 ಎಕರೆ ವಿಸ್ತೀರ್ಣದ ಸಸ್ಯತೋಟ (Plantation) ನಿರ್ಮಿಸಲು ಬಿಬಿಎಂಪಿ ಪ್ಲಾನ್ ಮಾಡಿದೆ. ಈಗಾಗಲೇ ಸಸ್ಯಕಾಶಿ ನಿರ್ಮಾಣಕ್ಕೆ ಅರಣ್ಯ ಇಲಾಖೆ (Forest Department) ಬ್ಲೂ ಪ್ರಿಂಟ್ (Blue Print) ರೆಡಿ ಮಾಡಿದೆ. ಬೆಂಗಳೂರಿನ ಹೊರಭಾಗದಲ್ಲಿ ಸಸ್ಯಕಾಶಿ ನಿರ್ಮಾಣಕ್ಕೆ ಚಿಂತನೆ ನಡೆಸಲಾಗಿದೆ. ಯಲಹಂಕ (Yelahanka) ಬಳಿ ಬಿಬಿಎಂಪಿ 150 ಎಕರೆ ಜಾಗ ಗುರುತಿಸಿದ್ದು, ವಿಭಿನ್ನ, ವಿಶಿಷ್ಟ ರೀತಿಯಲ್ಲಿ ಸಸ್ಯಕಾಶಿ ನಿರ್ಮಾಣವಾಗಲಿದೆ

ಸಸ್ಯಕಾಶಿಯಲ್ಲಿ ವಿವಿಧ ಬಗ್ಗೆಯ ಮರಗಳು, ಔಷಧೀಯ ಅಂಶವುಳ್ಳ ಸಸಿಗಳನ್ನು ನೆಟ್ಟು ಬೆಳೆಸಲಾಗುತ್ತದೆ. ಲಾಲ್ ಬಾಗ್, ಕಬ್ಬನ್ ಪಾರ್ಕ್‌ಗಿಂತ ವಿನೂತನವಾಗಿ ಸಸ್ಯಕಾಶಿ ನಿರ್ಮಾಣವಾಗಲಿದೆ. ಈ ಕುರಿತು ಈಗಾಗಲೇ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಅವರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಡಿಕೆ ಶಿವಕುಮಾರ್ ಅವರಿಂದ ಅನುಮತಿ ಸಿಕ್ಕ ಕೂಡಲೇ ಸಸ್ಯಕಾಶಿ ನಿರ್ಮಾಣಕ್ಕೆ ಪ್ಲಾನ್ ಮಾಡಲಾಗುತ್ತದೆ

Loading

Leave a Reply

Your email address will not be published. Required fields are marked *