Mandya: ದಳವಾಯಿ ಕೆರೆ ಬಳಿ ನವಜಾತ ಶಿಶುವಿನ ಶವ ಪತ್ತೆ..!

ಮಂಡ್ಯ: ನವಜಾತ ಹೆಣ್ಣು ಶಿಶು ಶವವಾಗಿ (Newborn Baby) ಪತ್ತೆಯಾಗಿರುವ ಘಟನೆ ಮಂಡ್ಯ (Mandya) ಜಿಲ್ಲೆಯ ಪಾಂಡವಪುರ ತಾಲೂಕಿನ ಮೇಲುಕೋಟೆ ಬಳಿಯ ದಳವಾಯಿ ಕೆರೆ ಬಳಿ ನಡೆದಿದೆ. ಮೇಲುಕೋಟೆಯ (Melukote) ಕೆರೆಯ ಬಳಿ ಕಂಡುಬಂದಿರುವ ಹೆಣ್ಣು ನವಜಾತ ಶಿಶು ಎರಡು ದಿನದ ಹಿಂದೆ ಜನಿಸಿರುವುದಾಗಿ ತಿಳಿದುಬಂದಿದ್ದು, ಹೆಣ್ಣು ಎಂಬ ಕಾರಣಕ್ಕೆ ಶಿಶುವನ್ನು ಎಸೆದು ಹೋಗಿರುವ ಶಂಕೆ ವ್ಯಕ್ತವಾಗಿದೆ.

ನಿರ್ಜನ ಪ್ರದೇಶದಲ್ಲಿ ಶಿಶುವನ್ನು ನೀಚರು ಎಸೆದು ಹೋಗಿದ್ದು, ಬಳಿಕ ಆ ಶಿಶು ಸಾವನ್ನಪ್ಪಿರಬಹುದು ಎಂದು ಸ್ಥಳೀಯರು ಅನುಮಾನ ವ್ಯಕ್ತಪಡಿಸಿದ್ದಾರೆ. ಸಾರ್ವಜನಿಕರ ಮಾಹಿತಿ ಮೇರೆಗೆ ಮೇಲುಕೋಟೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Loading

Leave a Reply

Your email address will not be published. Required fields are marked *