ಮೈಸೂರು: ಶುಂಠಿ,ತೊಗರಿ ಹಾಗೂ ಕಬ್ಬು ಬೆಳೆ ಮಧ್ಯೆ ಗಾಂಜಾಗಿಡ ಬೆಳೆದಿದ್ದ ಆರೋಪಿಯನ್ನ ಬಂಧಿಸುವಲ್ಲಿ ಹುಣಸೂರು ಗ್ರಾಮಾಂತರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.ಬಂಧಿತನಿಂದ 14 ಕೆಜಿ 862 ಗ್ರಾಂ ಹಸಿ ಗಾಂಜಾಗಿಡ ವಶಪಡಿಸಿಕೊಂಡಿದ್ದಾರೆ.ಕೂಡಲೂರು ಗ್ರಾಮದ ಸಂತೋಷ್ ಕುಮಾರ್(40) ಬಂಧಿತ.ಖಡಕ್ ಮಾಹಿತಿ ಅರಿತ ಹುಣಸೂರು ಗ್ರಾಮಾಂತರ ಠಾಣೆ ಇನ್ಸ್ಪೆಕ್ಟರ್ ಸಿ.ವಿ.ರವಿ ರವರು ಸಿಬ್ಬಂದಿಗಳ ಸಮೇತ ದಾಳಿ ನಡೆಸಿ ಗಾಂಜ ಸಮೇತ ಆರೋಪಿಯನ್ನ ಬಂಧಿಸಿದ್ದಾರೆ.
ಜಿಲ್ಲಾ ವರಿಷ್ಠಾಧಿಕಾರಿ ಸೀಮಾ ಲಾಟ್ಕರ್ ಅಡಿಷನಲ್ ಎಸ್ಪಿ ನಂದಿನಿ ಡಿವೈಎಸ್ಪಿ ಮಹೇಶ್ ರವರ ಮಾರ್ಗದರ್ಶನದಲ್ಲಿ ಹುಣಸೂರು ಗ್ರಾಮಾಂತರ ಠಾಣೆ ಇನ್ಸ್ಪೆಕ್ಟರ್ ಸಿ.ವಿ.ರವಿ ಸಿಬ್ಬಂದಿಗಳಾದ ಮಂಜುನಾಥ್,ರಮೇಶ್,ಮಲ್ಲೇಶ್,ನಂದೀಶ್,ರವಿ,ಇಮ್ರಾನ್ ಷರೀಫ್,ಮೆಹರಾಜ್ ಪಾಷ ರವರು ಕಾರ್ಯಾಚರಣೆ ನಡೆಸಿ ಯಶಸ್ವಿಗೊಳಿಸಿದ್ದಾರೆ