ಆ ಒಂದು ಫೋಟೋ ಅವಳ ಸಂಸಾರವನ್ನೇ ನುಚ್ಚುನೂರು ಮಾಡಿತ್ತು …! ನೇಣಿಗೆ ಶರಣಾದ ಸೊಸೆ

ಬೆಂಗಳೂರು;- ರಾಜಧಾನಿ ಬೆಂಗಳೂರಿನಲ್ಲಿ ಗೃಹಿಣಿ ಆತ್ಮಹತ್ಯೆ ಪ್ರಕರಣ ಸಂಬಂಧ ಸಾವಿನ ಹಿಂದಿನ ಅಸಲಿ ಕಹಾನಿ ಬಯಲೀಗಿದೆ. ಸರಸ್ವತಿಯನ್ನೇ ಮೀರಿಸುವಂತವಳು. ಆಕೆ ತಂದೆ ತಾಯಿಗೆ ಮುದ್ದಿನ ಮಗಳು. ವಿದ್ಯಾಭ್ಯಾಸದಲ್ಲಿ ಮಗಳು ಓದುವಾಗಲೇ ಮದುವೆ ಮಾಡ್ಬಿಟ್ರು ಅತ್ತೆ ಮನೆಯವರ ಒಪ್ಪಿಗೆ ಪಡೆದು ಅಮೆರಿಕದಲ್ಲಿ ಎಂಎಸ್ ಮುಗಿಸಿದ್ಲು ಆದರೆ ಸೋದರತ್ತೆ ಮಸಲತ್ತಿಗೆ ಮಗಳಂತೆ ನೋಡಿಕೊಂಡಿದ್ದ ಗಂಡನ ಮನೆಯರಿಗೆ ಅನುಮಾನ ಭೂತ ನೆತ್ತಿಗತ್ತಿತ್ತು ಅವಮಾನ ತಾಳದೆ ಚಂದದ ಚೆಲುವೆ ನೇಣಿಗೆ ಶರಣಾಆಗಿದ್ದಾಳೆ. ಆಕೆ ಚೆಂದುಳ್ಳಿ ಚೆಲುವೆ, ಯಾವ ಸಿನಿಮಾ ನಟಿಗೂ ಕಡಿಮೆ ಇಲ್ಲದ ಅಂದಗಾತಿ, ಮೂರ್ನಾಲ್ಕು ಡಿಗ್ರಿಯನ್ನ ಮುಡಿಗೆರಸಿಕೊಂಡು ವಿದೇಶದಲ್ಲಿ ವ್ಯಾಸಂಗ ಮಾಡಿ ಲಕ್ಷ ಲಕ್ಷ ಸಂಪಾದನೆ ಮಾಡ್ತಿದ್ಳು. ಆದ್ರೆ ಅನುಮಾನ ಅನ್ನೋ ಭೂತ ತಲೆಗತ್ತಿಸಿಕೊಂಡ ಗಂಡನ ಮನೆಯ ಕಾಟಕ್ಕೆ ಐದು ವರ್ಷದ ದಾಂಪತ್ಯ ಜೀವನಕ್ಕೆ ವಿದಾಯ ಹೇಳಿದ್ದಾಳೆ ನೊಂದು ಅಮ್ಮನ ಮನೆಯಲ್ಲಿ ನೇಣಿಗೆ ಶರಣಾಗಿದ್ದಾಳೆ.

ಈ ಚೆಲುವೆ ಹೆಸ್ರು ರೂಪವತಿ ಆಗಿದ್ದ ಐಶ್ವರ್ಯ ಕಳೆದ ಐದು ವರ್ಷದ ಹಿಂದೆ ರಾಜ್ಯದ ಪ್ರತಿಷ್ಟಿತ ಐಸ್ ಕ್ರೀಂ ಕಂಪನಿ ಮಾಲೀಕ ಗಿರಿಯಪ್ಪ ಗೌಡನ ಪುತ್ರ ರಾಜೇಶ್ ನ ವರಿಸಿದ್ಳು. ಬಿಇ ಅಂತಿಮವರ್ಷದಲ್ಲಿದ್ದ ಐಶ್ವರ್ಯಳನ್ನು ಮುಂದೆ‌ ಓದಿಸೋದಾಗಿ ಮಾತು ಕೊಟ್ಟಿದ್ದ ಗಿರಿಯಪ್ಪ ಗೌಡ ಫ್ಯಾಮಿಲಿ ಅದ್ರಂತೆ ಅಮೇರಿಕಾಗೆ ಐಶ್ವರ್ಯಾಳನ್ನ ಕಳುಹಿಸಿ ಮಾಸ್ಟರ್ ಮಾಡಿಸಿದ್ರು.ಈ ವೇಳೆ ಐಶ್ವರ್ಯ ಪಾಲಿಗೆ ವಿಲನ್ ಆಗಿಬಂದಿದ್ದು ಇದೇ ಐಶ್ವರ್ಯ ಸೋದರತ್ತೆ ಗೀತಾ ಮತ್ತು ಅತ್ತೆ ಮಗಳು ಲಿಪಿ. ಐಶ್ವರ್ಯ ತಂದೆ ಜೊತೆಗೆ ಆಸ್ತಿ ವಿಚಾರಕ್ಕ ಕಿರಿಕ್ ಮಾಡಿಕೊಂಡಿದ್ದ ಗೀತಾ, ಐಶ್ವರ್ಯ ಅಮೆರಿಕಾದಲ್ಲಿ ಸ್ನೇಹಿರತ ಜೊತೆಗೆ ಇದ್ದ ಒಂದಷ್ಟು ಪೋಟೋಗಳನ್ನ ಐಶ್ವರ್ಯ ಇನ್ಸ್ಟಾಗ್ರಾಮ್ ನಿಂದ ಸೇವ್ ಮಾಡಿಕೊಂಡಿದ್ಳು. ಐಶ್ವರ್ಯ ಮಾಡ್ರನ್ ಡ್ರೆಸ್ ಹಾಕಿದ್ದ ಫೋಟೋಗಳನ್ನ ಕ್ರಾಪ್ ಮಾಡಿ ಐಶ್ವರ್ಯ ಮಾವ ಗಿರಿಯಪ್ಪಗೆ ಕಳುಹಿಸಿ ನಿಮ್ಮ ಸೊಸೆ ಅಮೇರಿಕಾಗೆ ಓದೋಕೆ ಹೋಗಿಲ್ಲ ಶೋಕಿ ಮಾಡೋಕೆ ಹೋಗಿದ್ದಾಳೆ ಅಂತ ಐಶ್ವರ್ಯ ಬಗ್ಗೆ ಇಲ್ಲ ಸಲ್ಲದನ್ನ ಹೇಳಿದ್ರಂತೆ….
ಬೈಟ್ : ಗಿರೀಶ್ ಡಿಸಿಪಿ ಪಶ್ಚಿಮ

ಇದೇ ಅನುಮಾನದ ಮೇಲೆ ಅಮೇರಿಕಾದಿಂದ ಮನೆಗೆ ಬಂದ ಐಶ್ವರ್ಯಾಳಿಗೆ ಗಂಡ ರಾಜೇಶ್, ಮಾವ ಗೀರಿಯಪ್ಪ, ಅತ್ತೆ ಸೀತಾ, ಮೈದುನ ವಿಜಯ್ ಹಾಗೂ ವಿಜಯ್ ಪತ್ನಿ ತಸ್ಮಿ ಕಿರುಕುಳ ನೀಡ್ರಂತೆ. ಈಕೆ ಯಾರ ಬಳಿ ಮಾತಾಡಿದ್ರು ಅನುಮಾನದಿಂದ ಕಾಣುತ್ತಿದ್ದರಂತೆ ಈ ಬಗ್ಗೆ ತಾಯಿ ಬಳಿ ಐಶ್ವರ್ಯ ಹಲವು ಬಾರಿ ಅತ್ತೆ ಮನೆಯವರು ಕೊಡುತ್ತಿದ್ದ ಕಿರುಕುಳದ ಬಗ್ಗೆ ಮಾತನಾಡಿದ್ದಾಳೆ ಒಂದೆರಡು ಬಾರಿ ಕರೆದು ಮಾತನಾಡಿ ಸಮಾಧಾನ ಮಾಡಿದ್ರು ಅದೇ ಪದೇ ಪದೇ ಕಿರುಕುಳ ತಾಳಲಾರದೆ ಮನ ನೊಂದ ಐಶ್ವರ್ಯ ತಾಯಿ ಮನೆಗೆ ಬಂದು ಕಳೆದ ತಿಂಗಳು 26ರಂದು ನೇಣಿಗೆ ಶರಣಾಗಿದ್ದಾಳೆ.

ಇನ್ನು ಘಟನೆ ಸಂಬಂಧ ಐಶ್ವರ್ಯ ತಾಯಿ ಉಷಾ ಗೊವಿಂದರಾಜನಗರ ಠಾಣೆಯಲ್ಲಿ ದೂರು ನೀಡಿದ್ರು ದೂರಿನ್ವಯ ಪೊಲೀಸ್ರು ಗಿರಿಯಪ್ಪ, ಸೀತ,ರಾಜೇಶ್, ಸೇರಿ ಇಡೀ ಕುಟುಂಬವನ್ನ ಬಂಧಿಸಿದ್ದಾರೆ. ಇನ್ನೂ ಸಾವಿನಲ್ಲೂ ಸಾರ್ಥಕತೆ ಮೆರೆದಿರೋ ಐಶ್ವರ್ಯ ತನ್ನ ಕಣ್ಣುಗಳನನ್ನ ಇಬ್ಬರು ಅಂದರಿಗೆ ದಾನ ಮಾಡಿ ಮಣ್ಣು ಸೇರಿದ್ದಾಳೆ. ಇನ್ನು ಅನುಮಾನ ಅನ್ನೋ ಭೂತ ಒಂದು ಅಮಾಯಕ ಜೀವ ಬಾರದ ಲೋಕಕ್ಕೆ ಪಯಣ ಬೆಳೆಸಿದೆ…

Loading

Leave a Reply

Your email address will not be published. Required fields are marked *