ತುಮಕೂರು: ಲಾರಿ ಮತ್ತು ಬೈಕ್ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ತುಮಕೂರು ಜಿಲ್ಲೆ, ತುರುವೇಕೆರೆ ಬಳಿಯ ತೊರೆಮಾವಿನಹಳ್ಳಿ ಗೇಟ್ ಬಳಿ ನಡೆದಿದೆ. ಅಶೋಕ್ (55) ಮೃತ ದುರ್ದೈವಿಯಾಗಿದ್ದು, ತುರುವೇಕೆರೆ ಕಡೆಯಿಂದ ಕೆ.ಬಿ.ಕ್ರಾಸ್ ಮಾರ್ಗವಾಗಿ ತೆರಳುತ್ತಿದ್ದ ಲಾರಿ, ಕೆ.ಬಿ.ಕ್ರಾಸ್ ಕಡೆಯಿಂದ ತುರುವೇಕೆರೆ ಮಾರ್ಗವಾಗಿ ತೆರಳುತ್ತಿದ್ದ ಅಶೋಕ್ ಈ ವೇಳೆ ಲಾರಿ ಟೈರ್ ನಡಿ ಸಿಲುಕಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ತುರುವೇಕೆರೆ ತಾಲೂಕಿ ಎ.ಹೊಸಹಳ್ಳಿ ಗ್ರಾಮದ ಅಶೋಕ್ ಆಗಿದ್ದು, ಘಟನೆ ಸಂಭಂಧ ತುರುವೇಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.