ಚೀನಾದಲ್ಲಿ 5.5 ತೀವ್ರತೆಯ ಭೂಕಂಪ ಸಂಭವಿಸಿದ್ದು, ಪರಿಣಾಮವಾಗಿ 74 ಮನೆಗಳು ಕುಸಿದಿವೆ, 21 ಮಂದಿಗೆ ಗಾಯಗಳಾಗಿದ್ದು, 10 ಮಂದಿ ನಾಪತ್ತೆಯಾಗಿದ್ದಾರೆ. ಡೆಝೌ ನಗರದ ಪಿಂಗ್ಯುವಾನ್ ಕೌಂಟಿಯಲ್ಲಿ 5.5 ತೀವ್ರತೆಯ ಭೂಕಂಪನದ ಅನುಭವವಾಗಿದೆ. ಭಾನುವಾರ ಸ್ಥಳೀಯ ಕಾಲಮಾನ 2.30ಕ್ಕೆ ಕಂಪನ ಸಂಭವಿಸಿದೆ ಎನ್ನಲಾಗಿದೆ.
ಭೂಕಂಪದ ಕೇಂದ್ರಬಿಂದುವು ಡೆಝೌ ನಗರದ ದಕ್ಷಿಣಕ್ಕೆ 26 ಕಿ.ಮೀ ದೂರದಲ್ಲಿ 10 ಕಿ.ಮೀ ಆಳದಲ್ಲಿದೆ.ಶನಿವಾರದಂದು,
ಅಫ್ಘಾನಿಸ್ತಾನದಲ್ಲಿ 5.8 ರಿಕ್ಟರ್ ಮಾಪಕ ತೀವ್ರತೆಯ ಭೂಕಂಪನವೂ ಸಂಭವಿಸಿತ್ತು. ಭೂಕಂಪದ ಕೇಂದ್ರಬಿಂದು ಹಿಂದೂಕುಶ್ ಪ್ರದೇಶವಾಗಿತ್ತು. ಅಫ್ಘಾನಿಸ್ತಾನದಲ್ಲಿ ಸಂಭವಿಸಿದ ಭೂಕಂಪದಲ್ಲಿ ಯಾವುದೇ ಹಾನಿ ಸಂಭವಿಸಿಲ್ಲ. ಜಮ್ಮು ಮತ್ತು ಕಾಶ್ಮೀರದಲ್ಲಿ ಕೂಡ 4.7 ತೀವ್ರತೆಯ ಭೂಕಂಪ ಸಂಭವಿಸಿತ್ತು.ಭೂಕಂಪದ ಕೇಂದ್ರಬಿಂದು ಪಾಕಿಸ್ತಾನದ ಖೈಬರ್ ಪಖ್ತುಂಖ್ವಾ ಆಗಿತ್ತು.