ಚಾಲಕನ ನಿಯಂತ್ರಣ ತಪ್ಪಿ ರೈಲ್ವೇ ಬ್ರಿಡ್ಜ್’ಗೆ ಡಿಕ್ಕಿ: 26 ಮಂದಿಗೆ ಗಂಭೀರ ಗಾಯ

ರಾಯ್ಪುರ: ವಾಹನ ಚಲಾಯಿಸುವಾಗ ಫೋನ್ ಬಳಕೆ ಮಾಡಬಾರದು ಎಂಬ ಅರಿವಿದ್ದರೂ ಇಲ್ಲೊಬ್ಬ ಚಾಲಕ ಫೋನ್ ನಲ್ಲಿ ಮಾತನಾಡುತ್ತಾ ಬಸ್ ಓಡಿಸಿದ್ದಾನೆ. ಪರಿಣಾಮ 26 ಮಂದಿ ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ. ಈ ಘಟನೆ ಛತ್ತೀಸ್‍ಗಢ (Chhattisgarh) ದ ಘರ್ಘೋಡಾ (Gharghoda Area) ಪ್ರದೇಶದಲ್ಲಿ ನಡೆದಿದೆ. ಚಾಲಕ ಫೋನಿನಲ್ಲಿ ಮಾತನಾಡುತ್ತಾ ಚಾಲನೆ ಮಾಡಿದ ಪರಿಣಾಮ ಬಸ್ ಚಾಲಕನ ನಿಯಂತ್ರಣ ತಪ್ಪಿ ಪಕ್ಕದ ರೈಲ್ವೇ ಬ್ರಿಡ್ಜ್ (Railway Bridge) ಗೆ ಗುದ್ದಿದೆ.

ಪರಿಣಾಮ 26 ಮಂದಿ ಗಾಯಗೊಂಡಿದ್ದು, ಅದರಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದೆ. ಘಟನೆ ಸಂಬಂಧ ತನಿಖೆ ನಡೆಸಿದಾಗ ಚಾಲಕ ಫೋನ್ (Phone) ಬಳಕೆ ಮಾಡಿರುವುದು ಬಯಲಾಗಿದೆ. ಫೋನ್ ಬಳಕೆ ಮಾಡಿದ್ದೇ ಅಪಘಾತಕ್ಕೆ ಕಾರಣ ಎಂಬುದಾಗಿ ತಿಳಿದುಬಂದಿದೆ. ಸದ್ಯ ಗಾಯಾಳುಗಳನ್ನು ರಾಯ್‍ಗಢದ ಮೆಡಿಕಲ್ ಕಾಲೇಜಿಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ಎಸ್‍ಡಿಪಿಓ ದೀಪಕ್ ಮಿಶ್ರಾ ತಿಳಿಸಿದ್ದಾರೆ.

Loading

Leave a Reply

Your email address will not be published. Required fields are marked *