ಪರಿಚಿತ ಯುವಕನಿಂದಲೇ ನಡೆಯಿತಾ ಶಿಕ್ಷಕಿ ದೀಪಿಕಾ ಕೊಲೆ?

ಮಂಡ್ಯ: ಆಕೆ ವೃತ್ತಿಯಲ್ಲಿ ಶಿಕ್ಷಕಿ.  ಯಾವ ಹೀರೋಹಿನ್ ಗೂ ಕಡಿಮೆ ಇಲ್ಲದಂತೆ ಇದ್ದಾಕೆಗೆ ರೀಲ್ಸ್ ಗೀಳಿತ್ತು. ಕೆಲಸ ಮುಗಿಸಿ ಶಾಲೆಯಿಂದ ಹೊರಟಿದ್ದಾಕೆ ನಿಗೂಢವಾಗಿ ನಾಪತ್ತೆಯಾಗಿದ್ಲು. ಮೂರು ದಿನದ ಬಳಿಕೆ ಬೆಟ್ಟದ ತಪ್ಪಲಿನಲ್ಲಿ ಆಕೆಯ ಶವ ಪತ್ತೆಯಾಗಿತ್ತು. ಮೃತ ದೇಹ ಸಿಕ್ಕದ ಸ್ಥಿತಿ ನೋಡಿ ಆ ಭಾಗದ ಜನರೆಲ್ಲ ಮೆಚ್ಚಿಬಿದ್ದಿದ್ದಾರೆ. ಈ ನಡುವೆ 13 ಸೆಕೆಂಡ್ ವಿಡಿಯೋ ತುಣುಕು ಸಿಕ್ಕಿದ್ದು, ಅಕ್ಕ ಅಕ್ಕ ಅಂತಿದ್ದ ಯುವಕನೇ ಕೊಲೆಗೈದ್ನ ಎಂಬ ಅನುಮಾನವೂ ಮೂಡಿದೆ. ಈ ಕುರಿತ ಒಂದು ರಿಪೋರ್ಟ್ ಇಲ್ಲಿದೆ.

ಸಕ್ಕರೆ ನಾಡು ಮಂಡ್ಯ ಜಿಲ್ಲೆಯ ಐತಿಹಾಸಿಕ ಹಾಗೂ ಪುರಾಣಪ್ರಸಿದ್ಧ ಧಾರ್ಮಿಕ ಕ್ಷೇತ್ರ ಮೇಲುಕೋಟೆಯಲ್ಲಿ ಭಯಾನಕ ಕೃತ್ಯ ನಡೆದುಹೋಗಿದೆ. ಖಾಸಗಿ ಶಾಲೆಯ ಶಿಕ್ಷಕಿಯನ್ನ ಕೊಲೆಗೈದು ಬೆಟ್ಟದ ತಪ್ಪಲಿನಲ್ಲಿ ಹಂತಕರು ಹೂತಿಟ್ಟಿದ್ದು, ಆ ಭಾಗದ ಜನರನ್ನ ಬೆಚ್ಚಿಬೀಳಿಸುವಂತೆ ಮಾಡಿದೆ. ಅಂದಹಾಗೆ ಬೆಟ್ಟದ ತಪ್ಪಲಿನಲ್ಲಿ ಕೊಲೆಯಾದಾಕೆ ಹೆಸರು ದೀಪಿಕಾ. 28 ವರ್ಷದ ಈಕೆ ಪಾಂಡವಪುರ ತಾಲ್ಲೂಕಿನ ಮಾಣಿಕ್ಯನಹಳ್ಳಿ ನಿವಾಸಿ. ನೋಡೋದಕ್ಕೆ ಥೇಟ್ ಹೀರೋಹಿನ್ ರೀತಿ ಕಾಣುವ ದೀಪಿಕಾ ಕಳೆದ 9 ವರ್ಷದ ಹಿಂದೆ ತನ್ನದೇ ಊರಿನ ಲೋಕೇಶ್ ಎಂಬಾದನನ್ನು ಪ್ರೀತಿಸಿ ಮದುವೆಯಾಗಿದ್ದಳು.

ಅನ್ಯೋನ್ಯವಾಗಿಯೇ ಗಂಡನ ಜೊತೆ ಜೀವನ ಸಾಗಿಸುತ್ತಿದ್ದ ಈಕೆಗೆ 7 ವರ್ಷದ ಮಗನೂ ಇದ್ದಾನೆ. ಕಳೆದ ಒಂದೂವರೆ ವರ್ಷದಿಂದ ಮೇಲುಕೋಟೆಯ ಎಸ್ಇಟಿ ಪಬ್ಲಿಕ್ ಶಾಕೆಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡ್ತಿದ್ದ ದೀಪಿಕಾ ಕಳೆದ ಶನಿವಾರ ಎಂದಿನಂತೆ ತನ್ನ ಸ್ಕೂಟರ್ ನಲ್ಲಿ ಶಾಲೆಗೆ ಹೋಗಿದ್ಲು. ಅಂದು ಆಫ್ ಡೇ ಆಗಿದ್ರಿಂದ ಕೆಲಸ ಮುಗಿಸಿ ಮಧ್ಯಾಹ್ನ 12 ಗಂಟೆಗೆ ಶಾಲೆಯಿಂದ ಹೊರಟಾಕೆ ಸಂಜೆಯಾದ್ರೂ ಮನೆ ಸೇರಿರಲಿಲ್ಲ. ಇದ್ರಿಂದ ಆತಂಕಗೊಂಡ ಕುಟುಂಬಸ್ಥರು ಹುಡುಕಾಟ ಆರಂಭಿಸಿದಾಗ ನರಸಿಂಹಸ್ವಾಮಿ ಬೆಟ್ಟದ ಹಿಂಬಾಗದ ರಸ್ತೆಯಲ್ಲಿ ದೀಪಿಕಾ ಸ್ಕೂಟರ್ ಪತ್ತೆಯಾಗಿತ್ತು. ಇದ್ರಿಂದಾಗಿ ಮತ್ತಷ್ಟು ಆತಂಕಗೊಂಡ ದೀಪಿಕಾಳ ತಂದೆ ವೆಂಕಟೇಶ್ ಮೇಲುಕೋಟೆ ಪೊಲೀಸ್ ಠಾಣೆಗೆ ನಾಪತ್ತೆ ದೂರು ನೀಡಿದ್ರು.

ಈ ನಡುವೆ ಮಹಿಳೆಯೊಬ್ಬಳನ್ನ ಯುವಕನೊಬ್ಬ ಎಳೆದಾಡುತ್ತಿದ್ದ ದೃಶ್ಯವನ್ನ ಬೆಟ್ಟದ ಮೇಲಿಂದ ಪ್ರವಾಸಿಗರೊಬ್ಬರು ವಿಡಿಯೋ ಮಾಡಿ ಪೊಲೀಸರಿಗೆ ನೀಡಿದ್ರು. ಇಷ್ಟಾದ್ರೂ ಪೊಲೀಸರು ನಿರ್ಲಕ್ಷ್ಯ ಮಾಡಿದ್ರಿಂದ ದೀಪಿಕಾ ಪತಿ ಲೋಕೇಶ್ ಹಾಗೂ ಸಂಬಂಧಿಕರು ಬೈಕ್ ಪತ್ತೆಯಾಗಿದ್ದ ಸುತ್ತಮುತ್ತ ಹುಡುಕಾಟ ಆರಂಭಿಸಿದ್ರು. ಆ ವೇಳೆ ದುರ್ನಾತ ಬಂದ ಸ್ಥಳದಲ್ಲಿ ನೋಡಿದಾಗ ಶವ ಹೂತಿಟ್ಟಿರುವುದು ಕಂಡುಬಂತು. ಮಾಹಿತಿ ಪಡೆದ ಪೊಲೀಸರು ಉಪವಿಭಾಗಾಧಿಕಾರಿ ನಂದೀಶ್ ನೇತೃತ್ವದಲ್ಲಿ ಶವ ಹೊರತೆಗೆದ್ದಾರೆ. ಇನ್ನು ದೀಪಿಕಾ ಕೊಲೆಯಿಂದಾಗಿ ಇಡೀ ಕುಟುಂಬ ಆಕ್ರಂಧನದಲ್ಲಿ ಮುಳುಗಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ಪ್ರತ್ಯೇಕ ಎರಡು ತಂಡ ರಚಿಸಿದ್ದಾರೆ.

ಈ ನಡುವೆ ದೀಪಿಕಾ ಪೋಷಕರು ಅದೇ ಗ್ರಾಮದ 22 ವರ್ಷದ ನಿತೀಶ್ ಕೃತ್ಯ ನಡೆಸಿರಬಹುದು ಎಂದು ಗಂಭೀರ ಆರೋಪ ಮಾಡುತ್ತಿದ್ದಾರೆ. ಅಲ್ಲದೆ ದೀಪಿಕಾ ಪೋನ್ ಗೆ ಕೊನೆಯದಾಗಿ ನಿತೀಶ್ ಕರೆ ಮಾಡಿರೋದು ಅನುಮಾನವನ್ನ ಮತ್ತಷ್ಟು ಹೆಚ್ಚಾಗುವಂತೆ ಮಾಡಿದೆ. ಒಟ್ಟಾರೆ ಶಿಕ್ಷಕಿ ದೀಪಿಕಾ ಕೊಲೆ ಹಲವು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದ್ದು, ಅತ್ತ ಶವ ಪತ್ತೆಯಾಗುತ್ತಿದ್ದಂತೆ ನಿತೀಶ್ ತಲೆಮರೆಸಿಕೊಂಡಿದ್ದಾನೆ. ಈಗಾಗಲೇ ಆತನ ಪತ್ತೆ ಸೇರಿದಂತೆ ಹಲವು ಆಯಾಮಗಳಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದು, ಆರೋಪಿಗಳು ಸಿಕ್ಕ ಬಳಿಕವಷ್ಟೇ ಕೊಲೆಗಾರ ಯಾರು? ಕೊಲೆಗೆ ಕಾರಣ ಏನು? ಎಂಬುದು ಬಹಿರಂಗವಾಗಬೇಕಿದೆ.

Loading

Leave a Reply

Your email address will not be published. Required fields are marked *