ವಾಶಿಂಗ್ಟನ್: ಅಲ್ಖಾಯಿದಾದ ಬೆದರಿಕೆಯನ್ನು ಅಂತ್ಯಗೊಳಿಸುವಲ್ಲಿ ಅಮೆರಿಕವು ಅಫ್ಘಾನಿಸ್ತಾನದ ತಾಲಿಬಾನ್ ನ ನೆರವು ಪಡೆಯುತ್ತಿದೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಹೇಳಿದ್ದಾರೆ.
‘ಅಲ್ಖಾಯಿದಾದೊಂದಿಗೆ ತಾಲಿಬಾನ್ ಬಲಿಷ್ಠ ಮತ್ತು ನಿಕಟ ಸಂಬಂಧ ಹೊಂದಿದ್ದು ಅಲ್ಖಾಯಿದಾವು ಅಫ್ಘಾನ್ನ ನೆಲದಲ್ಲಿ ಕಾರ್ಯಾಚರಣೆ ಸಾಮರ್ಥ್ಯವನ್ನು ಮರುನಿರ್ಮಿಸುತ್ತಿದೆ’ ಎಂದು ಕಳೆದ ತಿಂಗಳು ವಿಶ್ವಸಂಸ್ಥೆ ಬಿಡುಗಡೆ ಮಾಡಿದ್ದ ವರದಿ ತಿಳಿಸಲಾಗಿತ್ತು.
ಇದೀಗ ಬೈಡನ್ ಇದಕ್ಕೆ ವ್ಯತಿರಿಕ್ತ ಹೇಳಿಕೆ ನೀಡಿದ್ದಾರೆ. 2021ರಲ್ಲಿ ಅಫ್ಘಾನ್ ನಿಂದ ಅಮೆರಿಕದ ಸೇನೆಯನ್ನು ಹಿಂಪಡೆಯುವ ನಿರ್ಧಾರ ಬಹುದೊಡ್ಡ ಪ್ರಮಾದ ಎಂದು ಒಪ್ಪಿಕೊಳ್ಳುತ್ತೀರಾ ಎಂದು ಸುದ್ದಿಗೋಷ್ಠಿಯಲ್ಲಿ ಎದುರಾದ ಪ್ರಶ್ನೆಗೆ ಉತ್ತರಿಸಿದ ಬೈಡನ್ ‘ಅಫ್ಘಾನ್ ಬಗ್ಗೆ ನಾನು ಹೇಳಿದ್ದು ನೆನಪಿದೆಯೇ ? ನಾವು ತಾಲಿಬಾನ್ ನಿಂದ ಸಹಾಯ ಪಡೆಯುತ್ತೇವೆ ಎಂದು ಹೇಳಿದ್ದೆ. ಈಗ ಏನಾಗುತ್ತಿದೆ? ನಿಮ್ಮ ಪತ್ರಿಕೆಯ ವರದಿಯನ್ನು ಒಮ್ಮೆ ಓದಿನೋಡಿ. ನಾನು ಹೇಳಿದ್ದು ಸರಿಯಾಗಿದೆ’ ಎಂದಿದ್ದಾರೆ.