ಗದಗ: ಊರಲ್ಲಿ, ಓಣಿಯಲ್ಲಿ, ಶಾಲಾ, ಕಾಲೇಜಿನಲ್ಲಿ ನಲ್ಲಿ ಅನ್ಯ ಧರ್ಮದ ಯುವಕರ ಜೊತೆ ಪ್ರೀತಿ, ಪ್ರೇಮ, ಸ್ನೇಹದ ಬಲೆಗೆ ಬಿಳ್ಳುವುದಿಲ್ಲ, ಅನ್ಯ ಧರ್ಮದವರ ಸ್ನೇಹ, ಪ್ರೀತಿ ಒಪ್ಪಲ್ಲ, ಅನ್ಯ ಧರ್ಮದ ಯುವಕ ಪ್ರೀತಿ, ಪ್ರೇಮ ಅಂತ ಬೆನ್ನುಬಿದ್ದರೇ ತಂದೆ-ತಾಯಿ ಗಮನಕ್ಕೆ ತರುತ್ತೇನೆ ಅಥವಾ ನಾನೇ ಅಂಥವರಿಗೆ ಬುದ್ಧಿ ಕಲಿಸುತ್ತೇನೆ…
ಇದು ಲವ್ ಜಿಹಾದ್‌ಗೆ ಒಳಗಾಗದಂತೆ ಗದಗದ ಎಸ್‌ಎಸ್‌ಕೆ ಸಮಾಜದ ಜನ ದೇವರ ಹೆಸರಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಪರಿ. ರಾಜ್ಯದಲ್ಲಿ ಲವ್ ಜಿಹಾದ್ ವಿಚಾರ ಮತ್ತೆ ಸದ್ದು ಮಾಡ್ತಿದ್ದು, ಮತ್ತೆ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರದ ವಿರುದ್ಧ ಆರೋಪಗಳು ಕೇಳಿಬರುತ್ತಿವೆ. ಈ ನಡುವೆ ಲವ್ ಜಿಹಾದ್‌ಗೆ ಒಳಗಾಗದಂತೆ ದೇವರ ಹೆಸರಿನಲ್ಲಿ ಸಮಾಜದ ಜನ ಪ್ರಮಾಣ ವಚನ ಸ್ವೀಕರಿಸಿರುವುದು ಗಮನ ಸೆಳೆದಿದೆ.