ತೆಲುಗು ಸಿನಿಮಾ ರಂಗದಲ್ಲಿ ಕಳೆದ ಒಂದೆರಡು ದಿನಗಳಿಂದ ಡ್ರಗ್ಸ್ ಸುದ್ದಿಗಳು ಸದ್ದು ಮಾಡುತ್ತಿದೆ. ಕಬಾಲಿ ಸಿನಿಮಾದ ನಿರ್ಮಾಪಕ ಕೆ.ಪಿ,ಚೌದರಿ, ಅಶು ರೆಡ್ಡಿ, ಹಿರಿಯ ನಟಿ ಸುರೇಖಾ ವಾಣೀ ಸೇರಿದಂತೆ ಸಾಕಷ್ಟು ಮಂದಿಯ ಹೆಸರು ಡ್ರಗ್ಸ್ ಪ್ರಕರಣದಲ್ಲಿ ಕೇಳಿ ಬಂದಿದೆ.
ಇದೀಗ ನಟಿ ಸುರೇಖಾ ಈ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಹಂಚಿಕೊಂಡಿರುವ ನಟಿ, “ಕಳೆದ ಕೆಲವು ದಿನಗಳಿಂದಲೂ ನನ್ನ ಮೇಲೆ ಮಾಡಲಾಗುತ್ತಿರುವ ಆರೋಪಗಳು ನಿಜವಲ್ಲ. ದಯವಿಟ್ಟು ನನ್ನ ಮೇಲೆ ನನ್ನ ಕುಟುಂಬ ಸದಸ್ಯರ ಮೇಲೆ ಮಾಡುತ್ತಿರುವ ಆರೋಪಗಳನ್ನು ನಿಲ್ಲಿಸಿ. ನೀವು ಮಾಡುತ್ತಿರುವ ಆರೋಪಗಳಿಂದ ನಮ್ಮ ವೃತ್ತಿ, ನಮ್ಮ ಭವಿಷ್ಯ ಮುಖ್ಯವಾಗಿ ನನ್ನ ಮಕ್ಕಳ ವೃತ್ತಿ ಮತ್ತು ಭವಿಷ್ಯಕ್ಕೆ ಧಕ್ಕೆ ಆಗುತ್ತಿದೆ. ಮಾತ್ರವಲ್ಲದೆ ಕೌಟುಂಬಿಕ ಆರೋಗ್ಯವೂ ಹದಗೆಡುತ್ತಿದೆ. ಬೇರೆ ಬೇರೆ ವಿಧದಲ್ಲಿ ಈ ಆರೋಪಗಳು ನಮ್ಮ ಮೇಲೆ ಪರಿಣಾಮ ಬೀರುತ್ತಿವೆ. ದಯವಿಟ್ಟು ನಮ್ಮ ಅರ್ಥ ಮಾಡಿಕೊಳ್ಳಿ” ಎಂದು ಸುರೇಖಾ ಕೈಮುಗಿದು ಬೇಡಿಕೊಂಡಿದ್ದಾರೆ.
ಡ್ರಗ್ಸ್ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಕೆಪಿ ಚೌಧರಿ ಜೊತೆ ಸುರೇಖಾ ಹಾಗೂ ಅವರ ಮಗಳಿಗೆ ಆಪ್ತ ಗೆಳೆತನ ಇತ್ತು. ಇಬ್ಬರೂ ಜೊತೆಯಾಗಿರುವ ಕೆಲವು ಫೊಟೊಗಳು ಕೆಪಿ ಚೌಧರಿ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಒಂದು ಫೋಟೊದಲ್ಲಂತೂ ನಟಿ ಸುರೇಖಾ, ಕೆಪಿ ಚೌಧರಿಗೆ ಮುತ್ತು ನೀಡುತ್ತಿದ್ದು, ಸುರೇಖಾ ಮಗಳು ಸಹ ಕೆಪಿ ಚೌಧರಿ ಜೊತೆಗೆ ಆಪ್ತವಾಗಿ ಫೊಟೊಗಳನ್ನು ತೆಗೆಸಿಕೊಂಡು ಅವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಇನ್ನು ನಟಿ ಸುರೇಖಾ ವಾಣಿ ಹಲವು ವರ್ಷಗಳಿಂದಲೂ ಸಿನಿಮಾಗಳಲ್ಲಿ ಪೋಷಕ ಪಾತ್ರಗಳನ್ನು ಮಾಡುತ್ತಾ ಬಂದಿದ್ದಾರೆ. ಹಲವು ಸ್ಟಾರ್ ನಟರ ಸಿನಿಮಾಗಳಲ್ಲಿ ಸುರೇಖಾ ವಾಣಿ ಅಕ್ಕ, ಅತ್ತಿಗೆ ಪಾತ್ರಗಳಲ್ಲಿ ನಟಿಸಿದ್ದಾರೆ. ಕೆಲವು ಸಿನಿಮಾಗಳಲ್ಲಿ ಹಾಸ್ಯ ನಟಿಯಾಗಿಯೂ ಸುರೇಖಾ ವಾಣಿ ನಟಿಸಿದ್ದು ಇದೀಗ ಡ್ರಗ್ಸ್ ಕೇಸ್ ನಲ್ಲಿ ನಟಿಯ ಹೆಸರು ತಗಲಾಕಿಕೊಂಡಿದೆ.