ಸುಪ್ರೀಂಕೋರ್ಟ್ ವಕೀಲೆಯ ಹತ್ಯೆ ಪ್ರಕರಣ: ಆರೋಪಿ ಅರೆಸ್ಟ್

ನವದೆಹಲಿ: ಸುಪ್ರೀಂಕೋರ್ಟ್ (SupremeCourt) ವಕೀಲೆಯನ್ನು ಹತ್ಯೆ ಮಾಡಿದ ಆರೋಪದಲ್ಲಿ ಮಾಜಿ ಭಾರತೀಯ ಕಂದಾಯ ಸೇವೆ ಅಧಿಕಾರಿ ಅಜಯ್ ನಾಥ್ ಎಂಬವರನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಮೃತ ಮಹಿಳೆಯನ್ನು ಆರೋಪಿಯ ಪತ್ನಿ ರೇಣು ಸಿನ್ಹಾ (61) ಎಂದು ಗುರುತಿಸಲಾಗಿದೆ.ರೇಣು ಸಿನ್ಹಾ (Renu Sinha) ತನ್ನ ಸಹೋದರನ ಕರೆಗಳಿಗೆ ಸ್ಪಂದಿಸದ ಹಿನ್ನೆಲೆ ಆತಂಕಗೊಡು ಪೊಲೀಸರಿಗೆ ದೂರು ನೀಡಿದ್ದರು. ದೂರಿನ ಅನ್ವಯ ತನಿಖೆ ಆರಂಭಿಸಿದ ಪೊಲೀಸರು, ಉತ್ತರ ಪ್ರದೇಶದ ನೋಯ್ಡಾದಲ್ಲಿರುವ ಬಂಗಲೆಯಲ್ಲಿ ಪರಿಶೀಲನೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.

ಪೊಲೀಸ್ ಮಾಹಿತಿ ಪ್ರಕಾರ, ಬಂಗಲೆಯನ್ನು ಲಾಕ್ ಮಾಡಲಾಗಿತ್ತು. ಬಾಗಿಲು ಒಡೆದು ಪ್ರವೇಶ ಮಾಡಿದಾಗ ರೇಣು ಸಿನ್ಹಾ ಶವ ಬಾತ್ ರೂಂನಲ್ಲಿ ಬಿದ್ದಿತ್ತು. ಹತ್ಯೆ ಮಾಡಿದ ಆರೋಪಿ ಅಜಯ್ ನಾಥ್ ಬಂಗಲೆಯ ಸ್ಟೋರ್ ರೂಂನಲ್ಲಿ ತಲೆಮರೆಸಿಕೊಂಡಿದ್ದ. ಸದ್ಯ ಅವರನ್ನು ಬಂಧಿಸಲಾಗಿದೆ. ದಂಪತಿ ಆಗಾಗ್ಗೆ ಜಗಳವಾಡುತ್ತಿದ್ದರು ಎಂದು ಸಹೋದರ ಬಹಿರಂಗಪಡಿಸಿದ್ದಾನೆ.

ತಮ್ಮ ಬಂಗಲೆಯನ್ನು 4 ಕೋಟಿ ರೂಪಾಯಿಗೆ ಮಾರಾಟ ಮಾಡಲು ಯೋಜಿಸಿದ್ದರು ಮತ್ತು ಮುಂಗಡವನ್ನೂ ತೆಗೆದುಕೊಂಡಿದ್ದರು ಎಂದು ಒಪ್ಪಿಕೊಂಡರು. ಆದರೆ ತಮ್ಮ ನಿರ್ಧಾರಕ್ಕೆ ಪತ್ನಿ ವಿರುದ್ಧವಾಗಿದ್ದರು. ಮೃತ ವಕೀಲರು ಕ್ಯಾನ್ಸರ್ ವಿರುದ್ಧ ಹೋರಾಡುತ್ತಿದ್ದರು ಮತ್ತು ಇತ್ತೀಚೆಗಷ್ಟೇ ಒಂದು ತಿಂಗಳ ಹಿಂದೆ, ಕ್ಯಾನ್ಸರ್ ಮುಕ್ತವಾಗಿದ್ದರು ಎಂದು ವಿಚಾರಣೆ ವೇಳೆ ಅಜಯ್ ನಾಥ್ ಹೇಳಿದ್ದಾರೆ. ಪ್ರಾಥಮಿಕ ತನಿಖೆಯ ವೇಳೆ ಅತಿಯಾದ ರಕ್ತ ಸೋರಿಕೆಯಿಂದ ರೇಣು ಸಾವನ್ನಪ್ಪಿರಬಹುದು ಎಂದು ತಿಳಿದು ಬಂದಿದ್ದು, ಮರಣೋತ್ತರ ಪರೀಕ್ಷೆ ವರದಿ ಬಂದ ನಂತರ ಸಾವಿಗೆ ನಿಖರ ಕಾರಣ ತಿಳಿದು ಬರಲಿದೆ. ಪೊಲೀಸರು ಅಪರಾಧ ನಡೆದ ಸ್ಥಳದಿಂದ ಪುರಾವೆಗಳನ್ನು ಸಂಗ್ರಹಿಸಿದ್ದಾರೆ ಮತ್ತು ಪ್ರಸ್ತುತ ತನಿಖೆ ನಡೆಯುತ್ತಿದೆ.

Loading

Leave a Reply

Your email address will not be published. Required fields are marked *