ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ಪ್ರಾಂಶುಪಾಲನೇ ವಿದ್ಯಾರ್ಥಿನಿ ಮೇಲೆ ಅತ್ಯಾಚಾರವೆಸಗಿರುವ ಪೈಶಾಚಿಕ ಕೃತ್ಯ ಬೆಳಕಿಗೆ ಬಂದಿದೆ. ಶಾಲೆಯಲ್ಲಿ ಓದುತ್ತಿದ್ದ 10 ವರ್ಷದ ವಿದ್ಯಾರ್ಥಿನಿ ಮೇಲೆ ಶಾಲಾ ಸಂಸ್ಥಾಪಕ ಮತ್ತು ಪ್ರಾಂಶುಪಾಲರಿಂದಲೇ ಅತ್ಯಾಚಾರ ನಡೆದಿರುವ ಘಟನೆ ವರ್ತೂರು ಸಮೀಪದ ಗುಂಜೂರು ಖಾಸಗಿ ಶಾಲೆಯೊಂದರಲ್ಲಿ ನಡೆದಿದೆ.
ಎಂದಿನಂತೆ ಗುರುವಾರ ಬೆಳಗ್ಗೆ 8.30ಕ್ಕೆ ಶಾಲೆಗೆ ಹೋಗಿದ್ದ ಬಾಲಕಿಯನ್ನು ತನ್ನ ಕೊಠಡಿಗೆ ಕರೆಸಿಕೊಂಡು ಅತ್ಯಾಚಾರವೆಸಗಿ ನಂತರ ಕೇಕ್ ಕೊಟ್ಟು ತಿನ್ನಸಿ ಸಮಾಧಾನ ಮಾಡಿ ಮನೆಗೆ ಕಳಹಿಸಿದ್ದನು. ಆ ನಂತರ ಮನೆಗೆ ಬಂದ ಬಾಲಕಿ ಹೊಟ್ಟೆನೋವು ಎಂದು ಹೇಳಿದ್ದಳು
ಬಾಲಕಿ ತಾಯಿ ಸ್ನಾನ ಮಾಡಿಸಲು ಕರೆದುಕೊಂಡು ಹೋದಾಗ ರಕ್ತದ ಕಲೆಗಳನ್ನು ನೋಡಿ ಶಾಲೆಯಲ್ಲಿ ಏನಾಗಿದೆ ಎಂದು ಕೇಳಿದಾಗ ಬಾಲಕಿ ಎಲ್ಲಾ ವಿಷಯವನ್ನು ಅಮ್ಮನ ಬಳಿ ತಿಳಿಸಿದ್ದಾಳೆ. 10 ವರ್ಷದ ಮಗು ನರದೌರ್ಬಲ್ಯ( Mild Dyslexia oct) ಕಾಯಿಲೆಯಿಂದ ಬಳಲುತ್ತಿದ್ದಳು.
ಆ ನಂತರ ತಾಯಿ ವರ್ತೂರು ಪೊಲೀಸರಿಗೆ ದೂರು ನೀಡಿದ ಬಳಿಕ ವರ್ತೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಕಾಮುಕನನ್ನು ಅರೆಸ್ಟ್ ಮಾಡಿದ್ದಾರೆ.ಆ ಪುಟ್ಟ ಬಾಲಕಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.