ಬೆಂಗಳೂರು ;- ಇಂದಿನಿಂದ ಐದು ದಿನ ಕರಾವಳಿಗೆ ಬಿರುಗಾಳಿ ಸಹಿತ ಧಾರಾಕಾರವಾಗಿ ಮಳೆ ಆಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಸುಮಾರು 15-20 ದಿನಗಳಿಂದಲೂ ಕರಾವಳಿ ಜಿಲ್ಲೆಗೆ ಬಿಟ್ಟು ಬಿಡದೇ ಮಳೆ ಬರುತ್ತಿದೆ. ಇದು ಮುಂದಿನ ಐದು ದಿನವೂ ಮುಂದುವರಿಯಲಿದೆ. ಉಡುಪಿ, ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳು ಇಂದು ಮತ್ತು ನಾಳೆ ಆರೆಂಜ್ ಅಲಟ್ ಪಡೆದಿವೆ. ನಾಡಿದ್ದಿನಿಂದ ಮೂರು ದಿನ ಯೆಲ್ಲೋ ಅಲರ್ಟ್ ಕೊಡಲಾಗಿದೆ.
ಈ ಜಿಲ್ಲೆಗಳಲ್ಲಿ ಬಿರುಗಾಳಿ ಸಹಿತ ಭಾರೀ ಮತ್ತು ಅತ್ಯಧಿಕ ಮಳೆ ಕಂಡು ಬರಲಿದೆ. ಇಲ್ಲಿ ಗಾಳಿಯ ವೇಗ ಪ್ರತಿ ಗಂಟೆಗೆ ಸುಮಾರು ಗರಿಷ್ಠ 45 ಕಿಲೋ ಮೀಟರ್ ವೇಗದಲ್ಲಿ ಬೀಸಲಿದೆ. ಕೆಲವೊಮ್ಮೆ ಪ್ರತಿ ಗಂಟೆಗೆ 50 ಕಿಲೋ ಮೀಟರ್ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇದೆ ಎಂದು ಹವಾಮಾನ ತಜ್ಞರು ಅಂದಾಜಿಸಿದ್ದಾರೆ.