ಬೆಂಗಳೂರು : ಡಿಸಿಎಂ , ಸಚಿವರಿಗೆ ಸರ್ಕಾರಿ ನಿವಾಸಗಳ ಹಂಚಿಕೆಯಾಗಿದ್ದು, ಜ್ಯೋತಿಷಿಗಳ ಸಲಹೆಯಂತೆ ಡಿಸಿಎಂ ಡಿಕೆ ಶಿವಕುಮಾರ್ ‘ಕುಮಾರಕೃಪಾ ನಿವಾಸ’ ಪಡೆದಿದ್ದಾರೆ.
ಡಿಸಿಎಂ ಡಿಕೆಶಿಗೆ ಕುಮಾರಕೃಪಾ ಪೂರ್ವದಲ್ಲಿರುವ ಸರ್ಕಾರಿ ನಿವಾಸ ಹಂಚಿಕೆ ಮಾಡಲಾಗಿದ್ದು, ಸಿದ್ದು ವಾಸ್ತವ್ಯ ಹೂಡಿದ್ದ ನಿವಾಸವನ್ನು ಡಿಕೆಶಿ ಪಡೆದಿದ್ದಾರೆ.
ಸಿದ್ದರಾಮಯ್ಯ ವಾಸ್ತವ್ಯ ಬದಲಿಸಿದ ನಂತರ ಡಿಕೆಶಿ ಅಲ್ಲಿಗೆ ಶಿಪ್ಟ್ ಆಗಲಿದ್ದಾರೆ.
ಜ್ಯೋತಿಷಿಗಳ ಸಲಹೆಯಂತೆ ಡಿಸಿಎಂ ಡಿಕೆ ಶಿವಕುಮಾರ್ ‘ಕುಮಾರಕೃಪಾ ನಿವಾಸ’ ಪಡೆದಿದ್ದಾರೆ. ಅದೇ ರೀತಿ ನೂತನ ಸಚಿವ ಎಂಬಿ ಪಾಟೀಲ್ ಗೆ ರೇಸ್ ವ್ಯೂ ಕಾಟೇಜ್ 1 ಹಂಚಿಕೆ ಮಾಡಲಾಗಿದೆ, ಸಚಿವ ಕೆಜೆ ಜಾರ್ಜ್ ಗೆ ರೇಸ್ ವ್ಯೂ ಕಾಟೇಜ್-2 ಹಾಗೂ ಪ್ರಿಯಾಂಕ್ ಖರ್ಗೆಗೆ ರೇಸ್ ವ್ಯೂ ಕಾಟೇಜ್-4 ಹಂಚಿಕೆ ಮಾಡಲಾಗಿದ್ದು, ಜಿ ಪರಮೇಶ್ವರ್ ಗೆ ಸದಾಶಿವನಗರದ ಸರ್ಕಾರಿ ನಿವಾಸ ಹಂಚಿಕೆ ಮಾಡಲಾಗಿದೆ.