ಢಾಕಾ: ಏಷ್ಯಾ ಕಪ್ 2023 (Asia Cup 2023) ಹಾಗೂ ಏಕದಿನ ವಿಶ್ವಕಪ್ ಸಮೀಪಿಸುತ್ತಿರುವ ಹೊತ್ತಿನಲ್ಲಿ ಆಟಗಾರರ ನೂತನ ಮಾದರಿಯ ತರಬೇತಿಗಳು ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಸಿಕೊಳ್ಳುತ್ತಿವೆ. ಬಾಂಗ್ಲಾದ ಸ್ಟಾರ್ ಕ್ರಿಕೆಟಿಗ ಮೊಹಮ್ಮದ್ ನಯಿಮ್ ಶೇಖ್ (Mohammad Naim) ಬೆಂಕಿಯ ಮೇಲೆ ನಡೆದು ಏಕಾಗ್ರತೆಯ ತರಬೇತಿ ಪಡೆದ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಬಹುತೇಕ ತಂಡಗಳು ಏಷ್ಯಾ ಕಪ್ 2023ರ ಪಂದ್ಯಗಳಿಗಾಗಿ ಅಂತಿಮ ಹಂತದ ಸಿದ್ಧತೆಯಲ್ಲಿವೆ. ಈ ಹೊತ್ತಿನಲ್ಲಿ ನಯಿಮ್ ಶೇಖ್ ಅವರ ಉರಿಯುವ ಕೆಂಡದ ಮೇಲಿನ ನಡಿಗೆಯ ವೀಡಿಯೋ ಬಾರೀ ಸದ್ದು ಮಾಡಿದೆ.
Naim Sheikh working with a mind trainer ahead of Asia Cup. pic.twitter.com/mkykegJ06p
— Saif Ahmed 🇧🇩 (@saifahmed75) August 18, 2023
ಆಗಸ್ಟ್ 30 ರಂದು ಪಾಕಿಸ್ತಾನದ ಮುಲ್ತಾನ್‍ನಲ್ಲಿ ಪಾಕ್ ಮತ್ತು ನೇಪಾಳ ನಡುವಿನ ಪಂದ್ಯದೊಂದಿಗೆ ಪಂದ್ಯಾವಳಿಯು ಪ್ರಾರಂಭವಾಗಲಿದೆ. ಬಹು ನಿರೀಕ್ಷಿತ ಭಾರತ-ಪಾಕಿಸ್ತಾನ ಘರ್ಷಣೆ ಸೆಪ್ಟೆಂಬರ್ 2 ರಂದು ಶ್ರೀಲಂಕಾದ ಕ್ಯಾಂಡಿಯಲ್ಲಿ ನಡೆಯಲಿದೆ. ನಂತರದ ಹಂತದಲ್ಲಿ ಸೆ.4 ರಂದು ಭಾರತವು ನೇಪಾಳವನ್ನು ಎದುರಿಸಲಿದೆ. ಪಾಕಿಸ್ತಾನವು ಮೂರು ಗ್ರೂಪ್ ಹಂತದ ಪಂದ್ಯಗಳು ಮತ್ತು ಸೂಪರ್ ಫೋರ್ ಹಂತದ ಪಂದ್ಯವನ್ನು ಆಯೋಜಿಸುತ್ತದೆ. ಉಳಿದ ಪಂದ್ಯಗಳು ಶ್ರೀಲಂಕಾದಲ್ಲಿ ನಡೆಯಲಿದೆ. ಫೈನಲ್ ಪಂದ್ಯ ಸೆಪ್ಟೆಂಬರ್ 17 ರಂದು ಕೊಲಂಬೊದಲ್ಲಿ ನಡೆಯಲಿದೆ. ಸೂಪರ್ ಫೋರ್ ಹಂತದಲ್ಲಿ ಎಲ್ಲಾ ತಂಡಗಳು ಪರಸ್ಪರ ಒಮ್ಮೆ ಆಡುತ್ತವೆ. ಸೂಪರ್ ಫೋರ್ ಹಂತದಿಂದ ಅಗ್ರ ಎರಡು ತಂಡಗಳು ನಂತರ ಫೈನಲ್‍ನಲ್ಲಿ ಮುಖಾಮುಖಿಯಾಗಲಿವೆ.