ಕಾಂಗ್ರೆಸ್ʼಗೆ ವೋಟ್ ಹಾಕಿದ ಎಸ್ ಟಿ ಸೋಮಶೇಖರ್..! ಬಿಜೆಪಿ ವಿಪ್ ಉಲ್ಲಂಘನೆ ಮಾಡಿದ‌ ಶಾಸಕ

ಬೆಂಗಳೂರು: ಯಶವಂತಪುರ ಬಿಜೆಪಿ ಶಾಸಕ ಎಸ್‌ಟಿ ಸೋಮಶೇಖರ್ ರಾಜ್ಯಸಭೆ ಚುನಾವಣೆಯಲ್ಲಿ ಮತ ಚಲಾಯಿಸಿದ್ದಾರೆ. ಈ ವೇಳೆ ‘ಆತ್ಮಸಾಕ್ಷಿಯಂತೆ ಮತ ಹಾಕಿದ್ದೇನೆ’ ಎಂದು ಹೇಳಿ ಅವರು ಕುತೂಹಲ ಕೆರಳಿಸಿದ್ದಾರೆ. ಬಿಜೆಪಿ ಮೂಲಗಳ ಪ್ರಕಾರ ಅವರು ಅಡ್ಡ ಮತದಾನ ಮಾಡಿದ್ದು,

ಕಾಂಗ್ರೆಸ್‌ ಅಭ್ಯರ್ಥಿ ಪರವಾಗಿ ಮತ ಹಾಕಿದ್ದಾರೆ. ಇದೇ ವೇಳೆ ಇನ್ನೋರ್ವ ಬಿಜೆಪಿ ಶಾಸಕ ಶಿವರಾಂ ಹೆಬ್ಬಾರ್ ನಡೆ ಏನು ಎಂಬುದು ಕುತೂಹಲಕ್ಕೆ ಕಾರಣವಾಗಿದೆ. ಈವರೆಗೆ ಅವರು ಮತದಾನ ಮಾಡಲು ಆಗಮಿಸಿಲ್ಲ. ಇದರ ನಡುವೆ ಮತದಾನ ಮಾಡಿದ ಬಳಿಕ ಮಾತನಾಡಿರುವ ಎಸ್‌ಟಿ ಸೋಮಶೇಖರ್, “ಆತ್ಮಸಾಕ್ಷಿಗೆ ಅನುಗುಣವಾಗಿ ಮತದಾನ ಮಾಡಿದ್ದೇನೆ. ನಾನು ಮತದಾನ ಮಾಡಿದ್ದನ್ನು ಏಜೆಂಟ್‌ಗೆ ತೋರಿಸಿದ್ದೇನೆ,” ಎಂದಿದ್ದಾರೆ.

Loading

Leave a Reply

Your email address will not be published. Required fields are marked *