World Cup Cricket : ನ್ಯೂಜಿಲೆಂಡ್ ವಿರುದ್ಧ ಭರ್ಜರಿ ಜಯ ಸಾಧಿಸಿದ ದಕ್ಷಿಣ ಆಫ್ರಿಕಾ

ಪುಣೆ: ಕ್ವಿಂಟನ್‌ ಡಿ ಕಾಕ್‌ (Quinton de Kock) ಮತ್ತು ಡುಸ್ಸೆನ್ (Rassie van der Dussen) ಅವರ ಶತಕದಾಟ ನಂತರ ಬೌಲರ್‌ಗಳ ಮಾರಕ ಬೌಲಿಂಗ್‌ ಸಹಾಯದಿಂದ ವಿಶ್ವಕಪ್‌ ಕ್ರಿಕೆಟ್‌ನಲ್ಲಿ (World Cup Cricket) ನ್ಯೂಜಿಲೆಂಡ್‌ (New Zealand) ವಿರುದ್ಧ ದಕ್ಷಿಣ ಆಫ್ರಿಕಾ (South Africa) 190 ರನ್‌ಗಳ ಭರ್ಜರಿ ಜಯ ಸಾಧಿಸಿದೆ.

ಟಾಸ್‌ ಸೋತು ಬ್ಯಾಟ್‌ ಮಾಡಿದ ದಕ್ಷಿಣ ಆಫ್ರಿಕಾ 50 ಓವರ್‌ಗಳಲ್ಲಿ 4 ವಿಕೆಟ್‌ ನಷ್ಟಕ್ಕೆ 357 ರನ್‌ ಹೊಡೆಯಿತು. ಭಾರೀ ಮೊತ್ತವನ್ನು ಚೇಸ್‌ ಮಾಡಲು ಆರಂಭಿಸಿದ  ನ್ಯೂಜಿಲೆಂಡ್‌  ಆರಂಭದಲ್ಲೇ ವಿಕೆಟ್‌ ಕಳೆದುಕೊಳ್ಳುತ್ತಾ ಸಾಗಿ ಅಂತಿಮವಾಗಿ 35.3 ಓವರ್‌ಗಳಲ್ಲಿ 167 ರನ್‌ಗಳಿಗೆ ಸರ್ವಪತನಗೊಂಡಿತು.

ಕೇಶವ್‌ ಮಹಾರಾಜ್‌ ಅವರು 4 ವಿಕೆಟ್‌ ಕಿತ್ತರೆ, ಮಾಕ್ರೋ ಜನ್ಸೆನ್‌ 3 ವಿಕೆಟ್‌ ಪಡೆದರು. ನ್ಯೂಜಿಲೆಂಡ್‌ ಪರವಾಗಿ ಗ್ಲೇನ್‌ ಫಿಲಿಪ್ಸ್‌ 60 ರನ್‌ (50 ಎಸೆತ, 4 ಬೌಂಡರಿ, 4 ಸಿಕ್ಸರ್‌) ವಿಲ್‌ ಯಂಗ್‌ 33 ರನ್‌(37 ಎಸೆತ, 5 ಬೌಂಡರಿ) ಹೊಡೆದು ಸ್ವಲ್ಪ ಪ್ರತಿರೋಧ ತೋರಿದರು

ಕ್ವಿಂಟನ್‌ ಡಿ ಕಾಕ್‌ ಅವರು 114 ರನ್‌ (116 ಎಸೆತ, 10 ಬೌಂಡರಿ, 3 ಸಿಕ್ಸ್‌) ಡುಸ್ಸೆನ್ 133 ರನ್‌ (118 ಎಸೆತ, 9 ಬೌಂಡರಿ, 5 ಸಿಕ್ಸರ್‌) ಹೊಡೆದು ಔಟಾದರು. ಡೇವಿಡ್‌ ಮಿಲ್ಲರ್‌ ಕೊನೆಯಲ್ಲಿ 30 ಎಸೆತ ಎದುರಿಸಿ 53 ರನ್‌ (2 ಬೌಂಡರಿ, 4 ಸಿಕ್ಸರ್‌) ಹೊಡೆದ ಪರಿಣಾಮ ದಕ್ಷಿಣ ಆಫ್ರಿಕಾ 350 ರನ್‌ ಗಳ ಗಡಿಯನ್ನು ದಾಟಿತು.

 

Loading

Leave a Reply

Your email address will not be published. Required fields are marked *