ಬೆಂಗಳೂರು: ಕಾಂಗ್ರೆಸ್ ಸೇರ್ಪಡೆ ವದಂತಿ ಬಗ್ಗೆ ಸ್ಪಷ್ಟನೆ ಕೊಟ್ಟಿರುವ ಸೋಮಶೇಖರ್, ನಮ್ಮ ಕ್ಷೇತ್ರದ ಬಿಡಿಎ ಲೇಔಟ್‍ಗೆ ಡಿಕೆಶಿ ಬಂದಿದ್ದರು. ಕ್ಷೇತ್ರದ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಚರ್ಚೆ ಮಾಡಿದ್ದೇನೆ. ನಾನು ರಾಜಕೀಯ ಮಾತನಾಡಿಲ್ಲ. ಆದರೆ ಸ್ಥಳೀಯ ಮೂಲ ಬಿಜೆಪಿಗರು ನನ್ನ ವಿರುದ್ಧ ಕೆಲಸ ಮಾಡುತ್ತಿದ್ದಾರೆ ಎಂದು ದೂರಿದರು.
ಡಿಕೆಶಿ ಅವರನ್ನು ನಾನು ಹೊಗಳಿದ್ದನ್ನೇ ಸ್ಥಳೀಯ ಬಿಜೆಪಿಗರು ವೈರಲ್ ಮಾಡುತ್ತಿದ್ದಾರೆ. ಡಿಕೆಶಿ ಹೊಗಳಿದ್ದಕ್ಕೆ ನಾನು ಕಾಂಗ್ರೆಸ್‍ಗೆ ಹೋಗುತ್ತೇನೆ. ಲೋಕಸಭೆಗೆ ಅಪ್ಪ, ವಿಧಾನಸಭೆಗೆ ಮಗ ಎಂದು ಸೋಷಿಯಲ್ ಮೀಡಿಯಾದಲ್ಲಿ ಬಿಂಬಿಸುತ್ತಿದ್ದಾರೆ. ಬಿಜೆಪಿಯವರೇ ನನಗೆ ಕಾಂಗ್ರೆಸ್‍ಗೆ ಕಳಿಸುವಂತಿದೆ ಎಂದು ಅಸಮಾಧಾನ ಹೊರ ಹಾಕಿದ್ದಾರೆ.
ಬೆಳಗ್ಗೆ ನಳಿನ್ ಕುಮಾರ್ ಕಟೀಲ್, ಸಿ.ಟಿ ರವಿ ಕಾಲ್ ಮಾಡಿದರು. ಸದಾನಂದ ಗೌಡರೂ ಮನೆಗೆ ಕರೆಸಿ ಮಾತಾಡಿದರು. 2 ಸಲ ಪ್ರಧಾನಿಯವರ ಕಾರ್ಯಕ್ರಮವನ್ನೂ ಮಾಡಿದ್ದೇನೆ. ನಾನೇನೂ ಪಕ್ಷ ವಿರೋಧಿ ಚಟುವಟಿಕೆ ಮಾಡಿಲ್ಲ, ಬಿಜೆಪಿ ಬಿಟ್ಟು ಹೋಗುವುದಿಲ್ಲ. ಇದರಲ್ಲಿ ಅನುಮಾನ ಇಲ್ಲ. ರಾಜ್ಯಾಧ್ಯಕ್ಷರ ಭೇಟಿಗೆ ಸಮಯ ಕೇಳಿದ್ದೇನೆ ಎಂದರು.