ಬೆಂಗಳೂರು: ರಾಜ್ಯ ಚುನಾವಣಾ ಆಯೋಗ ನೀಡಿರುವ ಮಾಹಿತಿ ಪ್ರಕಾರ, ಇಲ್ಲಿಯವರೆಗೆ ಶೇ.68.03% ಮತದಾನವಾಗಿದೆ ಅಂತ ತಿಳಿಸಿದೆ. ಜೂನ್ 13 ರಂದು 224 ಕ್ಷೇತ್ರದ 2615 ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ. ಇಂದು ಬೆಳಗ್ಗೆ 7 ಗಂಟೆಯಿಂದ ಶುರುವಾದ ಮತದಾನ ಇಂದು ಸಂಜೆ 6ಕ್ಕೆ ಮುಕ್ತಾಯವಾಗಿದೆ.
ಇಂದು ಬೆಳಗ್ಗೆ ಆರಂಭದಲ್ಲಿ ಮತದಾರರು ಮತದಾನವನ್ನು ಮಾಡಲು ನಿರುತ್ಸಾಹ ಕಂಡು ಬಂದಿತ್ತು, ಆದರೆ ಸಮಯ ಕಳೆದಂತೆ ಮತದಾರರು ಮತದಾನ ಕೇಂದ್ರಗಳತ್ತ ಆಗಮಿಸಿ, ಮತದಾನವನ್ನು ಮಾಡಿ, ಪ್ರಜಾಪ್ರಭುತ್ವದ ಹಬ್ಬದ ಭಾಗವಹಿಸಿ ಸಂಭ್ರಮಿಸಿದರು. ಇನ್ನೂ ಇಂದು ನಡೆದ ಮತದಾನದ ವೇಳೆಯಲ್ಲಿ,ಅಲಲ್ಲಿ ಸಣ್ಣ ಪುಟ್ಟ ಗಲಾಟೆ, ಹಾಗೂ ಮತ ಯಂತ್ರಗಳ ದೋಶವನ್ನು ಹೊರತು ಪಡಿಸಿ ಬಹುತೇಕವಾಗಿ ಶಾಂತಿಯುತವಾಗಿ ಮತದಾನ ನೇರವೇರಿದೆ.
ವರುಣಾದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ, ಶಿಗ್ಗಾವಿಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ. ಶಿಕಾರಿ ಪುರದಲ್ಲಿ ಮಾಜಿ ಸಿಎಂ ಬಿ ಎಸ್ ಯಡಿಯ್ಯೂರಪ್ಪ ಹಾಗೂ ಕನಕಪುರದಲ್ಲಿ ಡಿ.ಕೆ ಶಿವಕುಮಾರ್ ಅವರು ಮತದಾನವನ್ನು ಮಾಡಿದರು. ಹೊಳೆನರಸೀಪುರ ಕ್ಷೇತ್ರದ ಪಡುವಲಹಿಪ್ಪೆಯಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಪತ್ನಿ ಚನ್ನಮ್ಮ ಅವರೊಂದಿಗೆ ಆಗಮಿಸಿ ಮತಚಲಾಯಿಸಿದರು. ಇದಲ್ಲದೇ ಸ್ಯಾಂಡಲ್‌ವುಡ್ ನಟ ನಟಿಯರು ಕೂಡ ಮತದಾನದವನ್ನು ಮಾಡಿ ಎಲ್ಲರಿಗೂ ಮಾದರಿಯಾದ್ರು.