ಸ್ಕಿಪ್ಪಿಂಗ್ ಅಂದಾಕ್ಷಣ ಬಾಲ್ಯ ನೆನಪಾಗುತ್ತೆ, ಮಕ್ಕಳಾಗಿದ್ದಾಗ ಸಾಮಾನ್ಯವಾಗಿ ಎಲ್ಲರೂ ಸ್ಕಿಪ್ಪಿಂಗ್ ಆಟವಾಡಿರುತ್ತೇವೆ. ಸ್ಕಿಪ್ಪಿಂಗ್ ಒಂದು ವ್ಯಾಯಾಮವಾಗಿದ್ದು, ಇದು ದೇಹಕ್ಕೆ ತುಂಬಾ ಒಳ್ಳೆಯದು ಎಂದು ಪರಿಗಣಿಸಲಾಗಿದೆ. ಯಾಕೆಂದರೆ ಸ್ಕಿಪ್ಪಿಂಗ್ ಮಾಡುವುದರಿಂದ ಸಂಪೂರ್ಣ ದೇಹಕ್ಕೆ ವ್ಯಾಯಾಮವಾಗುತ್ತದೆ.
ಆದ್ದರಿಂದ ಸ್ಕಿಪ್ಪಿಂಗ್ ಮಾಡುವವರು ಫಿಟ್ ಆಯಂಡ್ ಫೈನ್ ಆಗಿರುತ್ತಾರೆ. ಬಹುತೇಕ ಮಂದಿ ತೂಕ ಇಳಿಸಲು ಸ್ಕಿಪ್ಪಿಂಗ್ ಮಾಡುತ್ತಾರೆ. ಆದರೆ ಅದರ ಜೊತೆಗೆ ಇತರೆ ಆರೋಗ್ಯಕರ ಲಾಭವೇನು ಎಂದು ಅವರಿಗೆ ತಿಳಿದಿರಲ್ಲ. ಕೇವಲ ತೂಕ ಇಳಿಸಲು ಮಾತ್ರವಲ್ಲ ಸ್ಕಿಪ್ಪಿಂಗ್ ಹೃದಯಕ್ಕೂ ಕೂಡ ಒಳ್ಳೆಯದು. ಯಾಕೆಂದರೆ ಸ್ಕಿಪ್ಪಿಂಗ್ ಪ್ರತಿ ನಿಮಿಷಕ್ಕೆ 10-15 ಕ್ಯಾಲೋರಿ ದಹಿಸುವುದು.
ಹೀಗಾಗಿ ಸ್ಕಿಪ್ಪಿಂಗ್ ಮಾಡುವುದರಿಂದ ದೇಹದಲ್ಲಿ ಇರುವ ಹೆಚ್ಚಿನ ತೂಕವನ್ನು ಇಳಿಕೆ ಮಾಡಿ ಫಿಟ್ ಆಗಿ ಇರಬಹುದಾಗಿದೆ. ಅಷ್ಟೇ ಅಲ್ಲದೆ ಸ್ಕಿಪ್ಪಿಂಗ್ ಮಾಡುವುದರಿಂದ ಸುಂದರ ತ್ವಚೆಯನ್ನು ಕೂಡ ನೀವು ಪಡೆಯಬಹುದು.ಆರೋಗ್ಯಕ್ಕೆ ಒಳ್ಳೆಯದು ಎಂದು ಹಿಗ್ಗಾಮುಗ್ಗ ಸ್ಕಿಪ್ಪಿಂಗ್ ಮಾಡುವುದು ಕೂಡ ತಪ್ಪು. ಇದರಿಂದ ದೇಹಕ್ಕೆ ಹೆಚ್ಚು ಆಯಾಸವಾಗುತ್ತದೆ. ಸುಮ್ಮನೆ ಹಗ್ಗ ಹಿಡಿದು ಹಿಗ್ಗಾಮುಗ್ಗ ಹಾರಿದರೆ ಜಾರಿ ಬಿದ್ದು, ಪೆಟ್ಟು ಮಾಡಿಕೊಳ್ಳುವ ಸಾಧ್ಯತೆ ಹೆಚ್ಚಾಗಿರುತ್ತೆ.
ಸ್ಕಿಪ್ಪಿಂಗ್ನಿಂದಆರೋಗ್ಯಕ್ಕಾಗುವಲಾಭಗಳೇನು..?
1. ಹೃದಯದಆರೋಗ್ಯಸುಧಾರಿಸುತ್ತೆ
ಸ್ಕಿಪ್ಪಿಂಗ್ ಅಥವಾ ಹಗ್ಗ ಜಿಗಿಯುವುದು ಒಂದು ಅದ್ಭುತ ಹೃದಯದ ವ್ಯಾಯಾಮವಾಗಿದೆ. ಸ್ಕಿಪ್ಪಿಂಗ್ ಮಾಡಿದಾಗ ಹೃದಯ ಬಡಿತ ಹೆಚ್ಚಾಗುತ್ತದೆ. ಇದರಿಂದ ಹೃದಯದ ಸ್ನಾಯುಗಳು ತುಂಬಾ ಬಲವಾಗಿ ಆಮ್ಲಜನಕಯುಕ್ತ ಮತ್ತು ಆಮ್ಲಜನಕವಿಲ್ಲದೆ ಇರುವ ರಕ್ತವನ್ನು ದೇಹಕ್ಕೆ ಪಂಪ್ ಮಾಡುತ್ತದೆ. ಆಗ ಹೃದಯದ ಆರೋಗ್ಯವೂ ಸುಧಾರಣೆ ಆಗುತ್ತದೆ. ಜೊತೆಗೆ ಎತ್ತರವು ಹೆಚ್ಚಾಗುತ್ತದೆ.
- ತೂಕಕಡಿಮೆಮಾಡುತ್ತೆ
ಸಾಮಾನ್ಯ ವ್ಯಾಯಮಕ್ಕಿಂತಲೂ ಸ್ಕಿಪ್ಪಿಂಗ್ ಹೆಚ್ಚಾಗಿ ದೇಹದಲ್ಲಿರುವ ಕ್ಯಾಲೋರಿ ಮತ್ತು ಕೊಬ್ಬು ಕರಗಿಸುತ್ತೆ ಎನ್ನಲಾಗುತ್ತೆ. ಇದು ಪೂರ್ತಿ ದೇಹಕ್ಕೆ ವ್ಯಾಯಾಮ ಆಗುವ ರೀತಿ ಮಾಡುವುದರಿಂದ ದೇಹದಲ್ಲಿರುವ ಬೇಡದ ಕೊಬ್ಬು ಬೇಗನೆ ಕರಗುತ್ತೆ. ಜೊತೆಗೆ ದೇಹವನ್ನು ಆರೋಗ್ಯವಾಗಿಡುತ್ತೆ. - ಶ್ವಾಸಕೋಶಕಾರ್ಯವನ್ನುಸುಧಾರಿಸುತ್ತೆ
ಸ್ಕಿಪ್ಪಿಂಗ್ ಮಾಡುವಾಗ ಉಸಿರಾಟ ಉತ್ತಮಗೊಳುತ್ತದೆ. ಇದು ಶ್ವಾಸಕೋಶದ ಸಾಮಥ್ರ್ಯವನ್ನು ವೃದ್ಧಿಸುತ್ತದೆ. ದೀರ್ಘ ಕಾಲದವರೆಗೆ ಸ್ಕಿಪ್ಪಿಂಗ್ ಮಾಡುವುದರಿಂದ ಆಗುವ ವ್ಯಾಯಾಮ ಹೃದಯ ರಕ್ತನಾಳದ ಕಾರ್ಯಗಳನ್ನು ಉತ್ತಮಗೊಳಿಸುತ್ತದೆ. - ದೇಹವನ್ನುಬಲಗೊಳಿಸುವುದು
ಸ್ಕಿಪ್ಪಿಂಗ್ ಒಂದು ಸಂಪೂರ್ಣ ದೇಹದ ವ್ಯಾಯಾಮವಾಗಿದ್ದು, ಇದು ದೇಹದ ಎಲ್ಲಾ ಭಾಗದಲ್ಲಿ ಇರುವಂತಹ ಕೊಬ್ಬನ್ನು ಕರಗಿಸುವುದು ಮತ್ತು ದೇಹವನ್ನು ಕಟ್ಟುಮಸ್ತಾಗಿ ಇಡುತ್ತದೆ. ಆದರಿಂದ ಫಿಟ್ ಆಗಿರಲು ಬಯಸುವವರು ಹೆಚ್ಚಾಗಿ ಸ್ಕಿಪ್ಪಿಂಗ್ ಮೊರೆಹೋಗುತ್ತರೆ. - ತ್ವಚೆಯಆರೋಗ್ಯಕ್ಕೆಒಳ್ಳೆದು
ಸ್ಕಿಪ್ಪಿಂಗ್ ಮಾಡುವುದರಿಂದ ದೇಹದಲ್ಲಿರುವ ಟಾಕ್ಸಿಕ್ ಅಂಶ ಬೆವರಿನ ಮೂಲದ ಹೊರಬರುತ್ತದೆ. ಪ್ರತಿನಿತ್ಯ ಸ್ಕಿಪ್ಪಿಂಗ್ ಮಾಡಿ ಬೆವರಿದಷ್ಟು ತ್ವಚೆಯ ಆರೋಗ್ಯಕ್ಕೆ ಒಳ್ಳೆದು.
ಯಾರುಸ್ಕಿಪ್ಪಿಂಗ್ಮಾಡಬಾರದು?
ಯಾವುದೇ ಶಸ್ತ್ರಚಿಕಿತ್ಸೆ ಅಥವಾ ಗಂಭೀರ ಗಾಯಗೊಂಡವರು ಸ್ಕಿಪ್ಪಿಂಗ್ ಮಾಡಬಾರದು. ವೈದ್ಯರು ಅಥವಾ ಫಿಸಿಯೋಥೆರಪಿಸ್ಟ್ ಬಳಿ ಸಲಹೆ ಪಡಿದು ಬಳಿಕ ಅವರ ಸೂಚನೆ ಪಾಲಿಸುವುದು ಉತ್ತಮ.
ಹೃದಯದ ಸಮಸ್ಯೆ ಇದ್ದವರು, ಅಧಿಕ ರಕ್ತದೊತ್ತಡವಿದ್ದರೆ, ಮೂಳೆ ಗಾಯದ ಸಮಸ್ಯೆಯಿದ್ದರೆ ವೈದ್ಯರ ಸಲಹೆ ಪಡೆದ ಬಳಿಕ ಸ್ಕಿಪ್ಪಿಂಗ್ ಮಾಡಿ.
ಸೂಚನೆ:
ಸ್ಕಿಪ್ಪಿಂಗ್ ಸುಲಭದ ಏರೋಬಿಕ್ಸ್ ವ್ಯಾಯಾಮವಾಗಿದ್ದು, ಇದು ಹಲವಾರು ರೀತಿಯ ಆರೋಗ್ಯಕರ ಲಾಭಗಳನ್ನು ನೀಡುವುದರಿಂದ ವ್ಯಾಯಾಮ ಕ್ರಮದಲ್ಲಿ ಐದು ನಿಮಿಷ ಕೊಬ್ಬು ಕರಗಿಸುವ ಸ್ಕಿಪ್ಪಿಂಗ್ ಸೇರಿಸಿದರೆ ಒಳ್ಳೆಯದು.ಮೊದಲ ಬಾರಿಗೆ ಸ್ಕಿಪ್ಪಿಂಗ್ ಮಾಡಲು ಆರಂಭಿಸುವವರು 1ರಿಂದ 5 ನಿಮಿಷ ಸ್ಕಿಪ್ಪಿಂಗ್ ಮಾಡಿ. ಬಳಿಕ ಈ ಸಮಯ ಹೆಚ್ಚಿಸುತ್ತಾ ಹೋಗಿ. ಪ್ರತೀ ವಾರವು 1-2 ನಿಮಿಷ ಕಾಲ ಸಮಯ ಹೆಚ್ಚಿಸುತ್ತಾ ಹೋಗಿ. ಹಾಗೆಯೇ 10-15 ನಿಮಿಷ ಕಾಲ ಸ್ಕಿಪ್ಪಿಂಗ್ ಮಾಡಿದ ಬಳಿಕ ವಿಶ್ರಾಂತಿ ಪಡೆಯಿರಿ, ಪಾನೀಯ ಸೇವಿಸಿ. ನಂತರ ಮತ್ತೆ ಸ್ಕಿಪ್ಪಿಂಗ್ ಮಾಡಿ. ಅದನ್ನು ಬಿಟ್ಟು ಒಂದೇ ಬಾರಿಗೆ 20-30 ನಿಮಿಷ ಸಿಪ್ಪಿಂಗ್ ಮಾಡಲು ಹೋಗಿ ಆಯಾಸ ಮಾಡಿಕೊಳ್ಳಬೇಡಿ.