ಕೆಲಸ ಕೊಟ್ಟ ಮಾಲೀಕನ ಬೆನ್ನಿಗೆ ಚೂರಿ ಹಾಕಲು ಸ್ಕೇಚ್: ಕೆಲಸಗಾರರು ಅಂದರ್..!

ಬೆಂಗಳೂರು: ಸಿನಿಮಾ ನೋಡಿ ಮಾಲೀಕನಿಗೆ ಉಂಡೆ ನಾಮ ಹಾಕಲು ಹೋದ ಕೆಲಸಗಾರರು ಅಂದರ್ ಆದ ಘಟನೆ ಬೆಂಗಳೂರಿನ ಆರ್.ಟಿ.ನಗರದಲ್ಲಿ ನಡೆದಿದೆ. ಹೆಸರಿಗಷ್ಟೆ ಕೆಲಸಗಾರರು, ನೋಡಿಕೊಂಡಿದ್ದು ಮನೆ ಮಗನಂತೆ ಆದರೆ ಕೆಲಸ ಕೊಟ್ಟ ಮಾಲೀಕನ ಬೆನ್ನಿಗೆ ಚೂರಿ ಹಾಕಲು ಸ್ಕೇಚ್ ಹಾಕಿದ್ದ ಮೂವರು ಆರೋಪಿಗಳನ್ನ ಪೊಲೀಸರು ಸೆದೆ ಬಡಿದಿದ್ದಾರೆ.  ಕೆಲಸ ಕೊಟ್ಟ ಮಾಲೀಕನಿಂದ ಹಣ ಕೀಳಲು ಕೆಲಸಗಾರನ ಮಾಸ್ಟರ್ ಪ್ಲಾನ್. ಕಿಡ್ನಾಪ್ ಕಥೆ ಕಟ್ಟಿ ಹಣ ಲಪಟಾಯಿಸಲು ಸ್ಕೇಚ್ ಹಾಕಿದ್ದ ಅಸಾಮಿ. ಸ್ನೇಹಿತರ ಜೊತೆ ಸೇರಿ ಕಿಡ್ನಾಪ್ ಕಥೆ ಕಟ್ಟಿ ಪೊಲೀಸರಿಗೆ ಲಾಕ್. ಮೊಹಮ್ಮದ್ ಆಸೀಫ್ ಹಬೀಬ್ ಎಂಬುವರ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ ನೂರುಲ್ಲಾ ಹುಸೇನ್.

ಮಾಲೀಕನ ಬಳಿ ಹಣ ಇದೆ ಅಂತಾ ಲಪಟಾಯಿಸಲು ನೂರುಲ್ಲಾ ಪ್ಲಾನ್.ತನ್ನ ಸ್ನೇಹಿತರಾದ ಅಬೂಬಕರ್ ಹಾಗು ಆಲಿ ರೇಝಾ ಎಂಬುವರ ಜೊತೆ ಕಿಡ್ನಾಪ್ ಪ್ಲಾನ್.ಕ್ಯಾಬ್ ಮಾಡಿ ಕಿಡ್ನಾಪ್ ಮಾಡಿದ್ದಾರೆ ಅಂತಾ ಮಂಡ್ಯಗೆ ಹೋಗಿದ್ದ ಆರೋಪಿಗಳು.ನಂತರ ಮಾಲೀಕ ಹಬೀಬ್ ಗೆ ಕರೆ ಮಾಡಿ ಕಿಡ್ನಾಪ್ ಮಾಡಿದ್ದಾರೆ ಎಂದಿದ್ದ ಆರೋಪಿ.ಎರಡು ಲಕ್ಷ ಹಣಕ್ಕೆ ಡಿಮಾಂಡ್ ಮಾಡುತ್ತಿದ್ದಾರೆ ಎಂದು ಕರೆ ಮಾಡಿದ್ದ.ಮನೆ ಮಗನಂತಿದ್ದವನಿಗೆ ತೊಂದರೆಯಾಗಿದೆ ಎಂದು ಪೊಲೀಸರಿಗೆ ವಿಚಾರ ಮುಟ್ಟಿಸಿದ್ದ ಮಾಲೀಕ ಎರಡು ಲಕ್ಷ ಹಣ ಕೊಡಲು ಮುಂದಾಗಿದ್ದ ಈ ವೇಳೆ ತನ್ನ ಅಕೌಂಟ್ ನಂಬರ್ ಗೆ ಹಾಕಲು ಹೇಳಿದ್ದ ಆರೋಪಿ ನೂರುಲ್ಲಾ. ಇದರಿಂದ ಅನುಮಾನಗೊಂಡ ಪೊಲೀಸರು ಹಾಗೂ ಹಬೀಬ್. ನಂತರ ಮೊಬೈಲ್ ಟ್ರಾಕ್ ವೇಳೆ ಆರೋಪಿಗಳು ಮಂಡ್ಯದಲ್ಲಿರುವುದು ಪತ್ತೆ. ಮಂಡ್ಯ ಪೊಲೀಸರ ಮೂಲಕ ಮೂವರನ್ನ ವಶಕ್ಕೆ ಪಡೆದಿದ್ದ ಪೊಲೀಸರು.ವಿಚಾರಣೆ ವೇಳೆ ಹಣ ಪಡೆದು ಕೆಲಸಗಾರರನ ಖತರ್ನಾಕ್ ಪ್ಲಾನ್ ಬಯಲಾಗಿದೆ.

ಹಣ ಪಡೆದು ಬಿಹಾರಕ್ಕೆ ಎಸ್ಕೇಪ್ ಆಗಲು ಸಂಚು ರೂಪಿಸಿದ್ದ ಆರೋಪಿಗಳು. ಮಾಲೀಕನಿಗೆ ವಂಚಿಸಿ ಎಸ್ಕೇಪ್ ಆಗಲು ಪ್ಲಾನ್ ಮಾಡಿದ್ದ ಆರೋಪಿಗಳು. ಈ ಸಂಬಂಧ ಆರ್ ಟಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು ಆ ನಂತರ ಮೂವರನ್ನ ಬಂಧಿಸಿ ವಿಚಾರಣೆ ನಡೆಸಿದ ಆರ್ ಟಿ ನಗರ ಪೊಲೀಸರು.

Loading

Leave a Reply

Your email address will not be published. Required fields are marked *