ರಾಯಚೂರು: ಲಿಂಗಾಯತ ಸಮುದಾಯದ ಅಧಿಕಾರಿಗಳಿಗೆ ಅನ್ಯಾಯ ಆಗುತ್ತಿಲ್ಲ. ಶಾಮನೂರು ಶಿವಶಂಕರಪ್ಪ ಅವರ ಮಗ ಮಲ್ಲಿಕಾರ್ಜುನ ಸಚಿವರಾಗಿದ್ದಾರೆ. ಅವರಿಗೆ ಎಷ್ಟು ಪ್ರಾಧಾನ್ಯತೆ ಕೊಡಬೇಕು, ಕೊಡಲಾಗಿದೆ. ಇನ್ನು ಕೊಡಬೇಕಂದರೇ ಕೊಡುತ್ತಾರೆ. ಶಿವಶಂಕ್ರಪ್ಪನವರು ನಮ್ಮ ಹಿರಿಯ ನಾಯಕರು.
ಪಕ್ಷನಿಷ್ಟೆಗೆ ಮಾದರಿಯಾಗಿರುವವರು. ಅವರಿಗೆ ಪಕ್ಷ ಕೂಡ ಗೌರವ ಕೊಟ್ಟಿದೆ. ಅಧಿಕಾರಿಗಳು ಮಾತನಾಡಿರಬಹುದು, ಅದಕ್ಕೆ ಸಹಜವಾಗಿ ಎಲ್ಲೋ ಕುಳಿತಲ್ಲಿ ಮಾತನಾಡಿರುತ್ತಾರೆ. ಅದು ಬಿಟ್ಟರೆ ಏನಿಲ್ಲ. ಅವರು ನಿಷ್ಟಾವಂತರು ಎಂದು ಸಚಿವ ಎನ್ ಎಸ್ ಬೋಸರಾಜ್ ಹೇಳಿದರು.