ಬೆಂಗಳೂರು: ನೆಚ್ಚಿನ ಪ್ರಧಾನ ಮಂತ್ರಿ ಹೇಳಿದಂತೆ ಅಮೃತ ಕಾಲ ಆರಂಭವಾಗಿದೆ. ಮುಂದಿನ 25 ವರ್ಷ ದೇಶದ ಅಭಿವೃದ್ಧಿ ಯ ಸಂಕಲ್ಪದೊಂದಿಗೆ ನಾವು ಕಾರ್ಯ ಪ್ರವೃತ್ತರಾಗಬೇಕಿದೆ.
ನಮ್ಮ ಹೊರಾಟಗಾರರ ತ್ಯಾಗ ಬಲಿದಾನ, ಸಂವಿಧಾನದ ಆದರ್ಶಗಳನ್ನು ಇಟ್ಟುಕೊಂಡು ದೇಶಕಟ್ಟಲು ಮುಂದಡಿ ಇಡೋಣ.
NEP ರದ್ದು ಮಾಡುತ್ತೇವೆ ಎನ್ನುವುದು ಆಶ್ಚರ್ಯ ಆಗಿದೆ. 2013 ರಲ್ಲಿಯೇ ಸಿದ್ದರಾಮಯ್ಯ ಅವರ ಸರ್ಕಾರ ಒಪ್ಪಿಗೆ ಕೊಟ್ಟಿದ್ದಾರೆ. ಅದರ ಅಧ್ಯಕ್ಷರು ಕಸ್ತೂರಿ ರಂಗನ್ ಅವರೇ ಇಡೀ ದೇಶದ ಶಿಕ್ಷಣ ನೀತಿ ಜಾರಿಗೆ ಮಾಡಿದ್ದಾರೆ. ಕೇವಲ ರಾಜಕಾರಣ ಮಾಡುವ ಉದ್ದೇಶದಿಂದ ಎನ್ ಇ ಪಿ ವಿರೋಧ ಮಾಡುತ್ತಿದ್ದಾರೆ. ಇದರಿಂದ ಗ್ರಾಮೀಣ ಪ್ರದೆಶದ ಮಕ್ಕಳಿಗೆ ದೊಡ್ಡ ಹೊಡೆತ ನೀಡಲಿದೆ. ಸಿದ್ದರಾಮಯ್ಯ ಕಾಮಾಲೆ ಕಣ್ಣಿನಿಂದ ಮೊಡೆದೆ ಮತ್ತೊಮ್ಮೆ ಪರಾಮರ್ಶೆ ಮಾಡಬೇಕು. ಇಲ್ಲದಿದ್ದರೆ ಮಕ್ಕಳು ಹಾಗೂ ಪಾಲಕರೊಂದಿಗೆ ದೊಡ್ಡ ಹೋರಾಟ ಮಾಡುತ್ತೇವೆ.
ರಾಜ್ಯದಲ್ಲಿ ರಾಜಕಿಯ ಪ್ರೇರಿತ ತನಿಖೆ ನಡೆಯುತ್ತಿವೆ. ಅವರಿಗೆ ಯಾವುದೇ ದಾಖಲೆ ಸಿಗದೇ ಇರುವುದರಿಂದ ಅನಗತ್ಯ ಆರೋಪ ಮಾಡಲು ಈ ತನಿಖೆ ನಡೆಸಲಾಗುತ್ತಿದೆ.
ಸುರ್ಜೆವಾಲ ಅವರ ಹೇಳಿಕೆ ಅತ್ಯಂತ ಖಂಡನೀಯ. ಅವರ ಮಾತು ಭಾರತದ ನಾಗರಿಕರಿಗೆ ಮಾಡಿದ ಅವಮಾನ. ಕಾಂಗ್ರೆಸ್ ನವರು ಏನು ತೊಳೆದ ಮುತ್ತಾ ? ಎಷ್ಟು ಜನ ಕಾಂಗ್ರೆಸ್ ನಾಯಕರು ಜೈಲಲ್ಲಿ ಇದ್ದಾರೆ. ಇದು ಅಕ್ಷಮ್ಯ, ಅಮಾನವೀಯ ಇದನ್ನು ಖಂಡಿಸುತ್ತೇವೆ.