ಬೆಂಗಳೂರು : ಹಿಜಾಬ್ ನಿಷೇಧ ಆದೇಶ ಹಿಂಪಡೆಯಲು ವಿಚಾರವಾಗಿ ಸಿಎಂ ಸಿದ್ದರಾಮಯ್ಯ ನಿರ್ಧಾರದ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಸುದಿಗೋಷ್ಟಿ ನಡೆಸಿ ಸಿಡಿದೆದ್ದಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಸುದ್ದಿಗೋಷ್ಟಿ ನಡೆಸಿ ಮೊದಲಿಗೆ, ಇಂದು ನಾಡಿನ ಸಮಸ್ತ ಜನತೆಗೆ ವೈಕುಂಠ ಏಕಾದಶಿ ಹಬ್ಬದ ಶುಭಾಶಯಗಳು ಎಂದು ಹಾರೈಸಿದ್ದಾರೆ., ಬಳಿಕ ಹಿಜಾಬ್ ವಿಚಾರದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಬೇಜವಾಬ್ದಾರಿತನದ ಕೆಲಸವನ್ನು ಮಾಡಿದ್ದಾರೆ ಎಂದು ಕಿಡಿಕಾರಿದ್ದಾರೆ.
.ಮತ್ತೆ ರಾಜ್ಯದಲ್ಲಿ ಹಿಜಾಬ್ ಧರಿಸಲು ಅವಕಾಶ ಮಾಡಿಕೊಡುತ್ತೇವೆ ಎನ್ನುವ ಹೇಳಿಕೆ ಮೂಲಕ ಶಿಕ್ಷಣವನ್ನು ಕಲುಷಿತಗೊಳಿಸುವಂತಹ ಕೆಲಸಕ್ಕೆ ಸಿಎಂ ಸಿದ್ದರಾಮಯ್ಯ ಅವರೇ ಕೈಹಾಕುತ್ತಾರೆ ಎನ್ನುವುದು ದುರಾದೃಷ್ಟಕರವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಸಿಡಿದೆದ್ದಿದ್ದಾರೆ. ಅಷ್ಟೇ ಅಲ್ಲದೇ ಕನಿಷ್ಟ ಪಕ್ಷ ಶಾಲಾ ಕಾಲೇಜಿಗೆ ಹೋಗುವ ಮಕ್ಕಳನ್ನಾದರೂ ರಾಜಕೀಯದಿಂದ ದೂರ ಇಡುವಂತಹ ಕೆಲಸವನ್ನಾದರೂ ಸಿಎಂ ಮಾಡಬೇಕಿತ್ತು. ಚಿಲ್ಡ್ರನ್ ಫರ್ಮ್ದಿ ಥರ್ಟಿ ಪಾಲಿಟಿಕ್ಸ್..ಎಂದು ಕಿಡಿಕಾರಿದ್ದಾರೆ.