Siddaramaiah: ಬಿಸಿ ನಾಗೇಶ್ ಇಡೀ ಶಿಕ್ಷಣ ವ್ಯವಸ್ಥೆಯನ್ನೇ ಹಾಳು ಮಾಡಿದ್ದಾರೆ: ಸಿದ್ದರಾಮಯ್ಯ

ತುಮಕೂರು: ತಿಪಟೂರು ಕ್ಷೇತ್ರದ ಶಾಸಕರೂ ಆಗಿರುವ ಶಿಕ್ಷಣ ಸಚಿವ ಬಿಸಿ ನಾಗೇಶ್ (BC Nagesh) ಅವರು ಪಕ್ಕಾ ಆರ್​ಎಸ್​ಎಸ್​.  ಇತಿಹಾಸ ತಿರುಚಿ ಪಠ್ಯ ಪುಸ್ತಕದಲ್ಲಿ ಸೇರಿಸುವ ಕೆಲಸ ಮಾಡಿದ ನೀಚ ವಿದ್ಯಾಮಂತ್ರಿ ಇವರ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಹೇಳಿದರು. ತಿಪಟೂರು ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ಅವರು, ಸಮಾಜದಲ್ಲಿ ‌ಇತಿಹಾಸ ತಿರುಚುವುದು, ಸಮಾಜ ಹೊಡೆಯುವುದು, ಒಂದು ಧರ್ಮದ ಮೇಲೆ ಇನ್ನೊಂದು ಧರ್ಮ ಎತ್ತಿಕಟ್ಟುವುದು ಬಿಟ್ಟರೆ ಬೇರೆ ಏನ್ ಕೆಲಸ ಇಲ್ಲ. ಇಡೀ‌ ಶಿಕ್ಷಣ ವ್ಯವಸ್ಥೆಯನ್ನೇ ಹಾಳು ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಮಕ್ಕಳಿಗೆ ನೈಜ ಚರಿತ್ರೆಯನ್ನ ತಿಳಿಸಬೇಕು. ಇತಿಹಾಸ ಮರೆಯುವವರು ಮುಂದೆ ಬರಲ್ಲ ಅಂತಾ ಅಂಬೇಡ್ಕರ್ ಹೇಳಿದ್ದರು. ಈ ಮನುಷ್ಯ ನಾಗೇಶ್ ಇದ್ದಾನಲ್ಲಾ ಇತಿಹಾಸವನ್ನೇ ತಿರುಚಿಬಿಡ್ತಾರೆ. ಇತಿಹಾಸ ತಿರುಚಿ ಪಠ್ಯ ಪುಸ್ತಕದಲ್ಲಿ ಸೇರಿಸುವ ಕೆಲಸ ಮಾಡಿದ ನೀಚ ವಿದ್ಯಾಮಂತ್ರಿ ನಾಗೇಶ್. ಇವರು ಕರ್ನಾಟಕದ ಅಭಿವೃದ್ಧಿ ಮಾಡಲು ಸಾಧ್ಯನಾ? ಇಂತವರು ಸೋಲೇಬೇಕು. ಯಾವ ಕಾರಣಕ್ಕೂ ಗೆಲ್ಲಬಾರದು ಎಂದರು.

ಕೊಬ್ಬರಿ ಬೆಲೆ ಬಿದ್ದೋಯ್ತು, ನಾನು ಮುಖ್ಯಮಂತ್ರಿ ಆಗಿದ್ದಾಗ ಕೊಬ್ಬರಿ ಬೆಲೆ ಕಮ್ಮಿ ಆದಾಗ ಬೆಂಬಲ ಬೆಲೆ ನೀಡಿದ್ದೆ. ಇದಕ್ಕೆ ಮಾಧುಸ್ವಾಮಿನೇ ಸಾಕ್ಷಿ ಎಂದ ಸಿದ್ದರಾಮಯ್ಯ ಅವರು ನೇರವಾಗಿ ಎನ್​ಎಸ್​ಯುಐ ಬಗ್ಗೆ ಪ್ರಸ್ತಾಪಿಸಿದರು. ವಿನಾಕಾರಣ ಎನ್​ಎಸ್​ಯುಐ ವಿದ್ಯಾರ್ಥಿಗಳ ಮೇಲೆ ಸುಳ್ಳು ಕೇಸ್ ಹಾಕಿ ಜೈಲಿಗೆ ಹಾಕಿದರು. ಆರ್​ಎಸ್​ಎಸ್​ ಚಡ್ಡಿ ಸುಟ್ಟಾಕಿದರು ಅಷ್ಟೇ. ಅದು ಇವರ ಚಡ್ಡಿನೋ ಆರ್​ಎಸ್​ಎಸ್​ ಚಡ್ಡಿನೋ ಗೊತ್ತಿಲ್ಲ. ಪ್ರತಿಭಟನೆ ಮಾಡಿದ್ದಕ್ಕೆ ಕೇಸ್ ಹಾಕಿ ಜೈಲಿಗೆ ಹಾಕಿದರು. ಬಿಜೆಪಿ ಅವರು ಶಾಶ್ವತವಾಗಿ ಅಧಿಕಾರದಲ್ಲಿ ಇರಲ್ಲಾ ಅಂತಾ ಅವತ್ತು ಎಸ್​ಪಿ ಹೇಳಿದ್ದೆ ಎಂದರು.

 

Loading

Leave a Reply

Your email address will not be published. Required fields are marked *