ಜನಸಾಮಾನ್ಯರಿಗೆ ಶಾಕ್: ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆ ಹೆಚ್ಚಳ!

ನವದೆಹಲಿ: ವಾಣಿಜ್ಯ ಬಳಕೆಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ 100 ರೂ. ಏರಿಕೆ ಮಾಡಲಾಗಿದ್ದು, ಇಂದಿನಿಂದ ಈ ದರ ಜಾರಿಗೆ ಬರಲಿದೆ. ಸರ್ಕಾರಿ ಒಡೆತನದ ತೈಲ ಮಾರುಕಟ್ಟೆ ಕಂಪನಿಗಳು ಜಾರಿ ಮಾಡಿರುವ ಈ ದರದಿಂದ ಗ್ರಾಹಕರ ಜೇಬಿಗೆ ಮತ್ತೆ ಹೊರೆಬೀಳಲಿದೆ. ವಾಣಿಜ್ಯ ಮತ್ತು ಗೃಹಬಳಕೆಯ ಎಲ್ಪಿಜಿ ಸಿಲಿಂಡರ್ಗಳ ಬೆಲೆಗಳು ಪ್ರತಿ ತಿಂಗಳ ಮೊದಲ ದಿನದಂದು ಮಾಸಿಕ ಪರಿಷ್ಕರಣೆಗಳಿಗೆ ಒಳಗಾಗುತ್ತವೆ.
ಅಂತೆಯೇ ಇತ್ತೀಚಿನ ಪರಿಷ್ಕರಣೆಯೊಂದಿಗೆ 19 ಕೆ.ಜಿ ವಾಣಿಜ್ಯ ಎಲ್ಪಿಜಿ ಸಿಲಿಂಡರ್ ಈಗ ದೆಹಲಿಯಲ್ಲಿ 1,731 ರೂ. ನಿಂದ 1,833 ರೂ., ಮುಂಬೈನಲ್ಲಿ 1,785.50 ರೂ., ಕೋಲ್ಕತ್ತಾದಲ್ಲಿ ರೂ.1,943 ಮತ್ತು ಚೆನ್ನೈ ಪ್ರತಿ ಸಿಲಿಂಡರ್ ಗೆ ರೂ.1,999.50ಕ್ಕೆ ಏರಿಕೆ ಆಗಿದೆ. ಅಕ್ಟೋಬರ್ನಲ್ಲಿ ತೈಲ ಕಂಪನಿಗಳು 209 ರೂ.ಗಳಷ್ಟು ದರವನ್ನು ಹೆಚ್ಚಿಸಿದ್ದವು. ಆದರೆ ಗೃಹಬಳಕೆಯ ಎಲ್ಪಿಜಿ ಬೆಲೆಯಲ್ಲಿ ಯಾವುದೇ ವ್ಯತ್ಯಾಸ ಕಂಡುಬಂದಿಲ್ಲ. ದೆಹಲಿಯಲ್ಲಿ 14.2 ಕೆಜಿ ಸಿಲಿಂಡರ್ಗೆ 903 ರೂ., ಬೆಂಗಳೂರಿನಲ್ಲಿ 905 ರೂ. ಇದೆ.

Loading

Leave a Reply

Your email address will not be published. Required fields are marked *