ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಯುತಿಯೊಬ್ಬಳನ್ನು ಕೊಲೆ ಮಾಡಿ ಮನೆ ಮುಂದೆ ಎಸೆದು ಹೋಗಿರುವ ಘಟನೆ ಮಹದೇವಪುರದ ಲಕ್ಷ್ಮಿ ಸಾಗರ ಲೇಔಟ್ ನಲ್ಲಿ ನಡೆದಿದೆ. ಶೆಲ್ ಪೆಟ್ರೋಲ್ ಬಂಕ್ ನಲ್ಲಿ ಕೆಲಸ ಮಾಡ್ತಿದ್ದ ಮಹಾನಂದಾ (21) ಎಂಬ ಯುವತಿಯನ್ನು ರಾತ್ರಿ ಕಾಣೆಯಾಗಿದ್ದಾಳೆಂದು ದೂರು ನೀಡಲಾಗಿತ್ತು ಆದರೆ ಮರುದಿನ ಬೆಳಗ್ಗಿನ ಜಾವ ನಾಲ್ಕು ಗಂಟೆ ವೇಳೆ ಮನೆ ಮುಂದೆ ಶವವಾಗಿ ಪತ್ತೆಯಾಗಿದ್ದಾಳೆ.
ಕಲಬುರಗಿ ಮೂಲಕ ಯುವತಿಯಾಗಿದ್ದು ಶೆಲ್ ಪೆಟ್ರೋಲ್ ಬಂಕ್ ನಲ್ಲಿ ಕೆಲಸ ಮಾಡುತ್ತಿದ್ದಳು. ಸ್ಥಳಕ್ಕೆ ಆಗಮಿಸಿದ್ದ ಮಹಾದೇವಪುರ ಪೊಲೀಸರು ಯುವತಿಯನ್ನು ಪರಿಶೀಲಿಸಿದ್ದಾರೆ ಆದರೆ ಮೃತ ಯುವತಿಯ ದೇಹದ ಮೇಲೆ ಯಾವುದೇ ರೀತಿಯ ಗಾಯದ ಗುರುತುಗಳು ಕಂಡು ಬಂದಿಲ್ಲದಿದ್ದರಿಂದ ಸೀನ್ ಆಫ್ ಕ್ರೈಮ್ ಪರಿಶೀಲಿಸುತ್ತಿರುವ ಪೊಲೀಸರು.ತನಿಖೆ ಬಳಿಕ ಸತ್ಯಾಸತ್ಯತೆ ಗೊತ್ತಾಗಲಿದೆ.