ಸನಾತನ ಧರ್ಮ ವಿವಾದಕ್ಕೆ ಪ್ರತಿಕ್ರಿಯೆ ನೀಡಲು ಶಾಮನೂರು ಶಿವಶಂಕರಪ್ಪ ನಿರಾಕರಣೆ

ಶಿವಮೊಗ್ಗ : ಸನಾತನ ಧರ್ಮ ನಿರ್ಮೂಲನೆ ಮಾಡಬೇಕು ಎಂಬ ತಮಿಳುನಾಡು ಸಿಎಂ ಎಂಕೆ ಸ್ಟಾಲಿನ್ ಪುತ್ರ ಉದಯನಿಧಿ ಸ್ಟಾಲಿನ್ ಹೇಳಿಕೆ ಈಗ ವಿವಾದದ ರೂಪ ಪಡೆದಿದೆ. ಉದಯನಿಧಿ ಸ್ಟಾಲಿನ್ ಹೇಳಿಕೆಗೆ ರಾಜ್ಯ ಕಾಂಗ್ರೆಸ್ ನಾಯಕರು ಮಿಶ್ರ ಪ್ರತಿಕ್ರಿಯೆ ನೀಡಿದ್ದಾರೆ. ಆದರೆ, ಹಿರಿಯ ಕಾಂಗ್ರೆಸ್ ಶಾಸಕ ಶಾಮನೂರು ಶಿವಶಂಕರಪ್ಪ ನಮ್ಮದು ಲಿಂಗಾಯತ ಧರ್ಮ ಎಂದು ಭಿನ್ನ ಹೇಳಿಕೆ ನೀಡಿದ್ದಾರೆ.

ಸನಾತನ ಧರ್ಮ ವಿವಾದದ ಬಗ್ಗೆ ಪ್ರತಿಕ್ರಿಯೆ ನೀಡಿ ಎಂದ ತಕ್ಷಣ, ಹೇ ಬೇಡಪ್ಪ, ನಮಗೆ ಯಾವ ಧರ್ಮ, ನಮ್ದು ಲಿಂಗಾಯತ ಧರ್ಮ ನಡಿ ಎಂದು ಪರ್ತಕರ್ತರಿಗೆ ಉತ್ತರಿಸಿದರು. ಅದಲ್ಲದೇ ನಮ್ದು ವೀರಶೈವ – ಲಿಂಗಾಯತ ಧರ್ಮ. ಇಂಡಿಯಾವನ್ನ ಭಾರತ ಎಂದು ಬದಲಿಸೋದೂ ಕೂಡ, ಲಿಂಗಾಯತ – ವೀರಶೈವ ಎಂಬ ಎರಡು ಪದಗಳನ್ನು ಬೇರೆ ಮಾಡಿದಂತೆ. ಎರಡೂ ಒಂದೇ ಎಂದು ಹೇಳಿದರು.

ಹಿಂದಿನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಪ್ರತ್ಯೇಕ ಲಿಂಗಾಯತ ಧರ್ಮದ ಬೇಡಿಕೆ ಇತ್ತು. ಈಗ ಪುನಃ ಕಾಂಗ್ರೆಸ್ ಅಧಿಕಾರ ಹಿಡಿದಿದೆ, ಬೇಡಿಕೆ ಇಲ್ಲವೇ ಎಂದು ಪ್ರಶ್ನಿಸಿದರೆ, ಹೌದು, ಆಗ ಇತ್ತು, ಈಗ ಒಬಿಸಿ ಕೋಟಾವನ್ನು ಲಿಂಗಾಯತರಿಗೆ ನೀಡಿ ಎಂದು ಬೇಡಿಕೆ ಇಡುತ್ತಿದ್ದೇವೆ ಎಂದು ತಿಳಿಸಿದರು. ಕರ್ನಾಟಕದಲ್ಲಿ ಲೋಕಸಭಾ ಚುನಾವಣೆಗೆ ಬಿಜೆಪಿ ಜೆಡಿಎಸ್ ಮೈತ್ರಿ ಬಗ್ಗೆ ಉತ್ತರಿಸಿದ ಅವರು, ಆ ಮೈತ್ರಿ ಬಗ್ಗೆ ತಲೆಕೆಡಿಸಿಕೊಳ್ಳುವುದು ಬೇಡ ಎಂದರು.

Loading

Leave a Reply

Your email address will not be published. Required fields are marked *