ಬೆಂಗಳೂರು:- ಸಿಲಿಕಾನ್ ಸಿಟಿ ಬೆಂಗಳೂರಿನ ಕಾಳೇನ ಅಗ್ರಹಾರ ಬಳಿ ಸರಣಿ ಅಪಘಾತ ಸಂಭವಿಸಿದ್ದು, ಅಪಘಾತದ ಭಯಾನಕ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ. ಚಾಲಕನ ನಿಯಂತ್ರಣ ತಪ್ಪಿ ಮೂರು ವಾಹನಗಳಿಗೆ ಚಾಲಕ ಡಿಕ್ಕಿ ಹೊಡೆದಿದ್ದಾನೆ.
ಡಿಕ್ಕಿಯ ರಭಸಕ್ಕೆ ಬೈಕ್ ಸವಾರ ಕಿರಣ್ ಮೇಲೆ ಹಾರಿಕೆಳಗೆ ಬಿದ್ದಿದ್ದಾರೆ. ಮತ್ತೊಂದು ಬೈಕ್ ನಲ್ಲಿದ್ದ ಜಸ್ಮಿತ ಹಾಗು ಬಸಂತ್ ಕುಮಾರ್ ಇವರಿಬ್ಬರಲ್ಲಿ ಜಸ್ಮಿತಾಗೆ ಗಂಭೀರಗಾಯವಾಗಿದೆ. ಅಭಿಷೇಕ್ ಅಗರವಾಲ್ ಕಾರು ಚಾಲಕ ಎನ್ನಲಾಗಿದ್ದು, ಹುಳಿಮಾವು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.