ಹಿರಿಯ ಬಿಜೆಪಿ ಮುಖಂಡ, ಹೋಟೆಲ್ ಉದ್ಯಮಿ ಸುಧಾಕರ್ ಶೆಟ್ಟಿ ಇನ್ನಿಲ್ಲ

ಉಡುಪಿ: ಇಂದು ಬೆಳಗ್ಗೆ ಖಾಸಗಿ ಆಸ್ಪತ್ರೆಯಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದ ಉಡುಪಿಯ ಹಿರಿಯ ಬಿಜೆಪಿ ಮುಖಂಡರೂ ಆಗಿರುವ ಶಾರದಾ ಇಂಟರ್ನ್ಯಾಷನಲ್ ಹೋಟೆಲ್ ಮಾಲಿಕ ಸುಧಾಕರ ಶೆಟ್ಟಿ ನಿಧನ ಹೊಂದಿದ್ದಾರೆ. ರಾಜಕೀಯ ಕ್ಷೇತ್ರದಲ್ಲಿ ಮಾತ್ರವಲ್ಲದೆ ಹೊಟೇಲ್ ಉದ್ಯಮದಲ್ಲಿ ಹೆಚ್ಚು ಹೆಸರುವಾಸಿಯಾಗಿದ್ದರು. ಇವರು ಪತ್ನಿ ಹಾಗೂ ಮೂವರು ಮಕ್ಕಳನ್ನು ಅಗಲಿದ್ದಾರೆ.

ಮೂರು ಬಾರಿ ಉಡುಪಿ ವಿಧಾನ ಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಸುಧಾಕರ ಶೆಟ್ಟಿ, ಎರಡು ಬಾರಿ ಬಿಜೆಪಿ ಹಾಗೂ ಒಂದು ಬಾರಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದರು. ಆದರೆ ಮೂರು ಚುನಾವಣೆಯಲ್ಲೂ ಇವರು ಸೋಲು ಅನುಭವಿಸಿದ್ದರು. 2009 ರಲ್ಲಿ ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿದ್ದರು.

 

Loading

Leave a Reply

Your email address will not be published. Required fields are marked *