ಬೆಂಗಳೂರು ;- ಪುಟ್ಟೇನಹಳ್ಳಿಯಲ್ಲಿ ವ್ಯಕ್ತಿಗೆ ಹನಿಟ್ರಾಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ರಂಗಿನಾಟ ಆಡುತ್ತಿದ್ದ ಮುಂಬೈ ಮಾಡೆಲ್ ಲಾಕ್ ಆಗಿದ್ದಾಳೆ. ನೇಹಾ ಅಲಿಯಾಸ್ ಮೆಹರ್ ನನ್ನು ಪುಟ್ಟೇನಹಳ್ಳಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಮುಂಬೈನಲ್ಲಿ ಬಂಧಿಸಿ ಪೊಲೀಸರು ಬೆಂಗಳೂರಿಗೆ ಕರೆತಂದಿದ್ದಾರೆ. ಈ ಮೊದಲು ಕೇಸ್ ನಲ್ಲಿ ಶರಣ ಪ್ರಕಾಶ ಬಳಿಗೇರ, ಅಬ್ದುಲ್ ಖಾದರ್, ಯಾಸಿನ್ ಬಂಧಿಸಲಾಗಿತ್ತು.
ಹನಿಟ್ರ್ಯಾಪ್ ಜಾಲಕ್ಕೆ ಕೆಡವಲು ‘ಕತ್ನಾ’ ಅಸ್ತ್ರ ಪ್ರಯೋಗ ಮಾಡಲಾಗಿತ್ತು. ಬಾಂಬೆ ಮಾಡೆಲ್ ಇಟ್ಟುಕೊಂಡು ಆರೋಪಿಗಳು ಬಲೆ ಬೀಸುತ್ತಿದ್ದರು.
ಓರ್ವ ಮಾಡೆಲ್ ಸೇರಿದಂತೆ ಖತರ್ನಾಕ್ ಗ್ಯಾಂಗ್ ಅರೆಸ್ಟ್ ಮಾಡಲಾಗಿದೆ. ಟೆಲಿಗ್ರಾಮ್ ಮೂಲಕ ಕೆಲವರನ್ನು ನೇಹಾ @ಮೆಹರ್ ಸಂಪರ್ಕ ಮಾಡುತ್ತಿದ್ದ.
ಲೈಂಗಿಕ ಕ್ರಿಯೆಗೆ ಅಂತಾ ಮನೆಯೊಂದಕ್ಕೆ ಕರೆಸಿಕೊಳ್ತಿದ್ಳು. ಜೆಪಿ ನಗರ ಐದನೇ ಹಂತದಲ್ಲಿರುವ ಮನೆಗೆ ಸಂತ್ರಸ್ಥರು ಸಂತ್ರಸ್ತರು ಬರುತ್ತಿದ್ದರು. ಮನೆ ಬೆಲ್ ಮಾಡ್ತಿದ್ದಂತೆ ಸುಂದರಿ ಬಿಕಿನಿಯಲ್ಲಿ ಸ್ವಾಗತ ಕೋರ್ತಿದ್ಳು. ಹಗ್ ಮಾಡಿ ವೆಲ್ಕಮ್ ಮಾಡ್ತಿದ್ಳು. ರಂಗಿನಾಟದ ಹಸಿ ಬಿಸಿ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು.
ಅತಿಥಿ ಎಂಟ್ರಿಯಾಗಿ ಮೂರೆ ನಿಮಿಷಕ್ಕೆ ಆರೋಪಿಗಳು ಎಂಟ್ರಿ ಆಗ್ತಿದರು. ಯುವತಿ ಜೊತೆಗಿನ ವಿಡಿಯೋ ಮೊಬೈಲ್ ನಲ್ಲಿ ಸೆರೆ ಹಿಡಿತಿದ್ರು. ಅದಕ್ಕೂ ಮೊದಲು ಎಂಟ್ರಿ ಆಗಿದ್ದ ವ್ಯಕ್ತಿ ಮೊಬೈಲ್ ಕಸಿದುಕೊಳ್ತಿದ್ರು. ಮೊಬೈಲ್ ನಲ್ಲಿರುವ ನಂಬರ್ ಎಲ್ಲವನ್ನು ನೋಟ್ ಮಾಡಿಕೊಳ್ತಿದ್ರು. ಇಷ್ಟಾಗ್ತಿದ್ದಂತೆ ಹಣಕ್ಕೆ ಡಿಮ್ಯಾಂಡ್ ಶುರುವಾಗುತ್ತಿತ್ತು.
ಹಣ ಕೊಡದಿದ್ರೆ ವಿಡಿಯೋ ಸ್ನೇಹಿತರು,ಸಂಬಂಧಿಕರು,ಕುಟುಂಬಸ್ಥರಿಗೆ ಕಳಿಸೋದಾಗಿ ಬೆದರಿಕೆ ಹಾಕುತ್ತಿದ್ದರು. ಅಲ್ಲದೇ ಯುವತಿ ಮುಸ್ಲಿಂ ಆಗಿದ್ದಾಳೆ. ಆಕೆಯನ್ನ ಮದುವೆ ಆಗುವಂತೆ ಡ್ರಾಮಾ ಮಾಡುತ್ತಿದ್ದರು.
ಮದುವೆ ಆಗಬೇಕಾದರೆ ಕತ್ನಾ ಮಾಡಿಸಬೇಕು ಎಂದು ಧಮ್ಕಿ ಮಾಡುತ್ತಿದ್ದರು. ಮುಸ್ಲಿಂ ಆಗಿ ಕನ್ವರ್ಟ್ ಆಗುವಂತೆ ಬೆದರಿಕೆ ಹಾಕ್ತಿದ್ರು. ಇದರಿಂದ ಹೆದರಿ ಸಂತ್ರಸ್ತರು ಹಣ ವರ್ಗಾವಣೆ ಮಾಡಿದ್ದರು.
ನೊಂದ ವ್ಯಕ್ತಿಯಿಂದ ಪುಟ್ಟೇನಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಲಾಗಿತ್ತು. ಸದ್ಯ ಘಟನೆ ಸಂಬಂಧ ನಾಲ್ವರನ್ನು ಅರೆಸ್ಟ್ ಮಾಡಲಾಗಿದೆ. ಇದೇ ರೀತಿ 12 ಕ್ಕೂ ಹೆಚ್ಚು ಜನರಿಗೆ ಹನಿಟ್ರ್ಯಾಪ್ ಮಾಡಿರೋದು ಬೆಳಕಿಗೆ ಬಂದಿದೆ.
ಒಟ್ಟು 30 ಕ್ಕೂ ಹೆಚ್ಚು ಲಕ್ಷವನ್ನು ಆರೋಪಿಗಳು ವರ್ಗಾಯಿಸಿಕೊಂಡಿದ್ದು, ಪುಟ್ಟೇನಹಳ್ಳಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ.