Bigg Boss Kannada 10: ದಿನೇದಿನೆ ಹೆಚ್ಚಾಗ್ತಿದೆ ಸಂಗೀತಾ-ಕಾರ್ತಿಕ್ ಪ್ರೇಮದಾಟ: ಅಪ್ಪುಗೆ ನಂತ್ರ ಮುತ್ತು

ಬಿಗ್ ಬಾಸ್ ಮನೆಯಲ್ಲಿ (Bigg Boss Kannada 10) ಪ್ರತಿ ಸೀಸನ್‌ನಲ್ಲೂ ಒಂದಲ್ಲಾ ಒಂದು ಪ್ರೇಮ ಕಥೆ ಇದ್ದೇ ಇರುತ್ತೆ. ಈ ಸೀಸನ್‌ನಲ್ಲಿ ಕಾರ್ತಿಕ್- ಸಂಗೀತಾ ಶೃಂಗೇರಿ (Sangeetha Sringeri) ಜೋಡಿ ಮೋಡಿ ಮಾಡ್ತಿದೆ. ಇಬ್ಬರ ನಡುವೆ ಸಮ್‌ಥಿಂಗ್ ಸಮ್‌ಥಿಂಗ್ ನಡೆಯುತ್ತಿದೆ ಎಂಬ ಸುದ್ದಿಯ ನಡುವೆ ಇದೀಗ ಸಂಗೀತಾಗೆ ಕಾರ್ತಿಕ್ ಸಿಹಿಮುತ್ತು ಕೊಟ್ಟಿದ್ದಾರೆ.

ದೊಡ್ಮನೆಯಲ್ಲಿ ಲವ್, ಬ್ರೇಕಪ್, ಪ್ರೀತಿ ಗೀತಿ ಇತ್ಯಾದಿ ಇವೆಲ್ಲವೂ ಕಾಮನ್ ಆಗಿದೆ. ಬಿಗ್ ಬಾಸ್ 10ನೇ ಸೀಸನ್‌ನಲ್ಲಿ ಕಾರ್ತಿಕ್-ಸಂಗೀತಾ ಲವ್ ಕಹಾನಿ ಹೈಲೆಟ್ ಆಗಿದೆ. ನಮ್ಮಿಬ್ಬರ ನಡುವೆ ಏನಿಲ್ಲ ಏನಿಲ್ಲ ಅಂತ ಹೇಳುತ್ತಲೇ ಹೊಸ ಪ್ರೇಮ ಕಾವ್ಯ ಬರೆಯಲು ರೆಡಿಯಾಗ್ತಿದ್ದಾರೆ. ಸಂಗೀತಾ ಜೊತೆ ಮಾತನಾಡುವಾಗ ನಾನು ಯಾರಿಗಾದರೂ ಭೇದ ಭಾವ ಮಾಡ್ತೀನಿ ಅಂತ ಅನಿಸುತ್ತಾ ಅಂತ ಕಾರ್ತಿಕ್ ಕೇಳಿದ್ದಾರೆ. ದಯವಿಟ್ಟು ನೀವು ಇದನ್ನೆಲ್ಲಾ ನನಗೆ ಕೇಳಲೇಬೇಡಿ ಅಂತ ಹೇಳುತ್ತಾರೆ.

ಬಳಿಕ ತನಿಷಾ ಕೂಡ ಇಬ್ಬರ ಜೊತೆ ಜಾಯಿನ್ ಆಗಿ ಮಾತನಾಡುತ್ತಾರೆ. ಮಾತನಾಡುತ್ತಿದ್ದಾಗ ಸಂಗೀತಾ ಕೈಗೆ ಕಾರ್ತಿಕ್ (Karthik) ಮುತ್ತು ಕೊಡುತ್ತಾರೆ. ಇದು ಸಂಗೀತಾ ಅರಿವಿಗೆ ಬಂದಿಲ್ಲ. ತನಿಷಾ ಇದನ್ನ ಗಮನಿಸಿ ಕೇಳುತ್ತಾರೆ. ಇಲ್ಲವಲ್ಲ ಹಾಗೇನು ಆಗಿಲ್ಲ, ಅವರ ಕೈಯಲ್ಲಿನ ಸ್ಮೆಲ್ ನೋಡಿದೆ ಎಂದು ಕಾರ್ತಿಕ್ ಟಾಪಿಕ್ ಬದಲಿಸುತ್ತಾರೆ. ಬಿಗ್ ಬಾಸ್‌ಗೆ ಗ್ರ್ಯಾಂಡ್‌ ಆಗಿ ಎಂಟ್ರಿ ಕೊಡುವ ದಿನ ಕಾರ್ತಿಕ್, ಅಮ್ಮಾ ಮನೆಗೆ ಸೊಸೆಯನ್ನ ಕರಕೊಂಡು ಬರುತ್ತೀನಿ ಅಂದಿದ್ದರು. ಅಂದಿನ ಆ ಮಾತನ್ನೇ ನಿಜ ಮಾಡುವ ಹಾದಿಯಲ್ಲಿದ್ದಾರೆ. ದಿವ್ಯಾ‌ ಉರುಡುಗ (Divya Uruduga) ಮತ್ತು ಅರವಿಂದ್ (Aravind Kp) ಜೋಡಿಯಂತೆಯೇ ಕಾರ್ತಿಕ್-ಸಂಗೀತಾ ಕೂಡ ಜೋಡಿಯಾಗುವ ಮುನ್ಸೂಚನೆ ಸಿಕ್ತಿದೆ. ಎಲ್ಲದಕ್ಕೂ ಮುಂದಿನ ದಿನಗಳಲ್ಲಿ ಉತ್ತರ ಸಿಗಲಿದೆ.

Loading

Leave a Reply

Your email address will not be published. Required fields are marked *