ಟಾಲಿವುಡ್ ಬ್ಯೂಟಿ ನಟಿ ಸಮಂತಾ ಮಯೋಸಿಟಿಸ್ ಎಂಬ ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದಾರೆ. ಇದೇ ಕಾರಣಕ್ಕಾಗಿ ಒಪ್ಪಿಕೊಂಡ ಸಿನಿಮಾಗಳನ್ನು ಮುಗಿಸಿರುವ ನಟಿ ಸಿನಿಮಾಗಳಿಂದ ಕೊಂಚ ಬ್ರೇಕ್ ಪಡೆದುಕೊಂಡು ತಮ್ಮ ಆರೋಗ್ಯದ ಕಡೆ ಗಮನ ಹರಿಸಿದ್ದಾರೆ. ಸದ್ಯ ಇಶಾ ಫೌಂಡೇಶನ್ ಆದಿಯೋಗಿಗೆ ಭೇಟಿ ನೀಡಿರುವ ನಟಿ ಅಲ್ಲಿ ಧ್ಯಾನ ಮಾಡಿ, ದಿನ ಕಳೆಯುತ್ತಿರುವ ಫೋಟೋಗಳನ್ನ ಶೇರ್ ಮಾಡಿದ್ದಾರೆ.
ಬಾಲಿವುಡ್ ನಟ ವರುಣ್ ದವನ್ ಜೊತೆಗಿನ ಸಿಟಾಡೆಲ್ ಹಾಗೂ ವಿಜಯ್ ದೇವರಕೊಂಡ ಜೊತೆಗಿನ ‘ಖುಷಿ’ ಸಿನಿಮಾವನ್ನು ಸಮಂತಾ ಕಂಪ್ಲೀಟ್ ಮಾಡಿದ್ದಾರೆ. ಎರಡು ಪ್ರಾಜೆಕ್ಟ್ನಲ್ಲೂ ಭಿನ್ನವಾಗಿ ಕಾಣಿಸಿಕೊಂಡಿದ್ದಾರೆ. ನಾಗಚೈತನ್ಯ ಜೊತೆಗಿನ ಡಿವೋರ್ಸ್, ಅನಾರೋಗ್ಯದ ಸಮಸ್ಯೆ ಇರೋದ್ರಿಂದ ಇದೆಲ್ಲದರಿಂದ ಅವರಿಗೆ ಬಿಡುವು ಬೇಕಾಗಿದೆ. ಆರೋಗ್ಯ ಮತ್ತು ಮನಸ್ಸಿಗೆ ರಿಲಾಕ್ಸೇಷನ್ ಗಾಗಿ ಇದೀಗ ಧ್ಯಾನದ ಮೊರೆ ಹೋಗಿದ್ದಾರೆ.
ಸದ್ಗುರುವಿನ ಅನುಯಾಯಿ ಆಗಿರುವ ಸಮಂತಾ, ಕೊಯಮತ್ತೂರಿನಲ್ಲಿ ಸದ್ಗುರು ಸ್ಥಾಪಿಸಿರುವ ಇಶಾ ಸೆಂಟರ್ ಸೇರಿಕೊಂಡಿದ್ದು ಅಲ್ಲಿ, ಸದ್ಗುರುವಿನ ಮಾರ್ಗದರ್ಶನದಲ್ಲಿ ಧ್ಯಾನ, ಪೂಜೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಜೊತೆಗೆ ಸುಂದರವಾದ ಪ್ರಕೃತಿಯನ್ನು ಎಂಜಾಯ್ ಮಾಡುತ್ತಿದ್ದಾರೆ.
ಇತರ ಭಕ್ತಾಧಿಗಳ ಜೊತೆಗೆ ನೆಲಹಾಸಿನ ಮೇಲೆ ಕುಳಿತು ಧ್ಯಾನ ಮಾಡುತ್ತಿರುವ ತಮ್ಮ ಚಿತ್ರವನ್ನು ಸಮಂತಾ ಹಂಚಿಕೊಂಡಿದ್ದಾರೆ. ಕೆಲವು ಹೊತ್ತಿಗೆ ಮುಂಚೆ ಏನಾದರೂ ತಿರುವುತ್ತಾ, ಮುರಿಯುತ್ತಾ, ಮೈಯಿ ಕೆರೆಯುತ್ತಾ, ಯೋಚನೆಗಳ ಪ್ರವಾಹಗಳಲ್ಲಿ ಇರುತ್ತಿದ್ದೆ. ಇವುಗಳನ್ನು ಮಾಡದೆ ಸುಮ್ಮನೆ ಕೂರುವುದು ಅಸಾಧ್ಯ ಎಂಬ ಪರಿಸ್ಥಿತಿಯಲ್ಲಿದ್ದೆ. ಆದರೆ ಇಂದು ಸತತವಾಗಿ ಧ್ಯಾನಮಗ್ನಳಾಗಿದ್ದೆ. ಧ್ಯಾನ ನನ್ನ ಶಕ್ತಿ ಎಂದು ಅರಿತುಕೊಂಡೆ. ಧ್ಯಾನ ನನ್ನ ಸಂವಹನ, ನನಗೆ ಸ್ಪಷ್ಟನೆಯನ್ನು ನೀಡುತ್ತದೆ ಎಂದು ಅರಿತುಕೊಂಡೆ. ಇಷ್ಟು ಸರಳವಾದ ಕಾರ್ಯವೊಂದರಲ್ಲಿ ಇಷ್ಟು ಶಕ್ತಿ ಅಡಗಿರುತ್ತದೆ ಎಂದು ತಿಳಿದಿರಲಿಲ್ಲ ಎಂದು ಸಮಂತಾ ಬರೆದುಕೊಂಡಿದ್ದಾರೆ.